ಮೈಸೂರು: ಶತಮಾನ ಕಂಡಿರುವ ಮೈಸೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ನ (ನ್ಯಾಕ್) ಎ+ನಿಂದ ಎ ಗ್ರೇಡ್ಗೆ ಇಳಿದಿದೆ.

‘ಅತ್ಯುತ್ತಮ ಸೌಲಭ್ಯಗಳಿರುವುದರಿಂದ ಎ+ ಶ್ರೇಯಾಂಕ ಉಳಿಸಿಕೊಳ್ಳುವ ಭರವಸೆಯಿತ್ತು. ಆದರೆ, ಬೋಧಕರ ಕೊರತೆ ಹಾಗೂ ಸಂಶೋಧನೆ ಪ್ರಮಾಣ ತಗ್ಗಿದ್ದರಿಂದ ಅಂಕಗಳು ಕಡಿಮೆಯಾದವು. ಹೀಗಾಗಿ, ‘ಎ’ ಮಾನ್ಯತೆ ಸಿಕ್ಕಿದೆ. ಬಂದಿದ್ದನ್ನು ಒಪ್ಪಿಕೊಳ್ಳಬೇಕಷ್ಟೇ’ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕಳೆದ ವಾರ ಭೇಟಿ ನೀಡಿದ್ದ ನ್ಯಾಕ್ ಸಮಿತಿಯ ಸದಸ್ಯರು ಮೂರು ದಿನ ಮೂವತ್ತು ವಿಭಾಗಗಳು ಹಾಗೂ ಸೌಲಭ್ಯಗಳನ್ನು ಪರಿಶೀಲಿಸಿದ್ದರು. ಬೋಧಕರು, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಮಾತನಾಡಿಸಿದ್ದರು.

‘400 ಬೋಧಕರ ಕೊರತೆಯಿರುವುದರಿಂದ ಅತಿಥಿ ಉಪನ್ಯಾಸಕರನ್ನು ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದೆವು. ಮಾನ್ಯತೆಯು ಐದು ವರ್ಷಗಳ ಅವಧಿಗೆ ಇರಲಿದೆ. ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ವರ್ಕ್ನ (ಎನ್ಐಆರ್ಎಫ್) ಶ್ರೇಯಾಂಕ ಪಟ್ಟಿಯ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ 19ನೇ ಸ್ಥಾನ ಸಿಕ್ಕಿದ್ದು, ಹಿಂದಿನದಕ್ಕಿಂತ ಎಂಟು ಸ್ಥಾನ ಮೇಲೇರಿದ್ದೇವೆ’ ಎಂದು ಕುಲಸಚಿವ ಪ್ರೊ.ಆರ್.ಶಿವಪ್ಪ ತಿಳಿಸಿದರು.

ರಾಜ್ಯದ ಉಳಿದ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ನಾವು ಮುಂದೆ ಇದ್ದೇವೆ
-ಪ್ರೊ.ಜಿ.ಹೇಮಂತಕುಮಾರ್,ಕುಲಪತಿ, ಮೈಸೂರು ವಿಶ್ವವಿದ್ಯಾಲಯ

ನಮ್ಮಲ್ಲಿ ಉತ್ತಮ ಸೌಲಭ್ಯಗಳಿದ್ದರೂ. ನ್ಯಾಕ್ ಮಾನದಂಡವೇ ಬೇರೆ. ಬೋಧಕರ ಕೊರತೆಯಿಂದ ಕಡಿಮೆ ಅಂಕ ನೀಡಿರಬಹುದು
-ಪ್ರೊ.ಆರ್.ಶಿವಪ್ಪ,ಕುಲಸಚಿವ, ಮೈಸೂರು ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.