ಮಂಗಳವಾರ, ಜುಲೈ 5, 2022
25 °C
ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಕಾರಾಗೃಹಗಳ ಪರಿಶೀಲನೆಗೆ ಎನ್‌ಜಿಒ ಸೂಚಿಸಿ: ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ಕಾರಾಗೃಹಗಳ ಪರಿಶೀಲನೆ ನಡೆಸಿ, ಅಲ್ಲಿನ ವ್ಯವಸ್ಥೆ ಸುಧಾರಣೆಗೆ ಸಲಹೆ ನೀಡಲು ಸರ್ಕಾರೇತರ ಸಂಸ್ಥೆಯೊಂದರ (ಎನ್‌ಜಿಒ) ಹೆಸರನ್ನು ಸೂಚಿಸುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಗುರುವಾರ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ಪೀಠ, ಕಾರಾಗೃಹಗಳ ಸುಧಾರಣೆಗೆ ಸಂಬಂ ಧಿಸಿದ ಪ್ರಕರಣದ ವಿಚಾರಣೆ ನಡೆಸಿತು. ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ ಬಂದಿಖಾನೆ ಇಲಾಖೆ, ‘ರಾಜ್ಯದ ಕಾರಾಗೃಹಗಳಲ್ಲಿ 15,083 ಕೈದಿಗಳನ್ನು ಇರಿಸಲು ಸ್ಥಳಾವಕಾಶವಿದೆ. ಈಗ 14,535 ಜನರಿದ್ದು, ಶೇಕಡ 96ರಷ್ಟು ಭರ್ತಿಯಾಗಿವೆ. 47 ಕಾರಾಗೃಹಗಳ ಪೈಕಿ 13ರಲ್ಲಿ ಸ್ಥಳಾವಕಾಶಕ್ಕಿಂತ ಹೆಚ್ಚು ಜನರನ್ನು ಇರಿಸಲಾಗಿದೆ’ ಎಂದು ಮಾಹಿತಿ ನೀಡಿತು.

ಕಾರಾಗೃಹಗಳ ಸುಧಾರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ 2020ರ ಮಾರ್ಚ್‌ನಲ್ಲಿ ಆದೇಶ ಹೊರಡಿಸಿದ ಬಳಿಕ ಹಲವು ಕ್ರಮ ಗಳನ್ನು ಕೈಗೊಳ್ಳಲಾಗಿದೆ. ಹೆಚ್ಚಿನ ಜನರನ್ನು ಇರಿಸಿದ್ದ ಒಂಬತ್ತು ಕಾರಾ ಗೃಹಗಳಿಂದ 575 ಮಂದಿಯನ್ನು 15 ಇತರ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲಾಗಿದೆ. ಜೈಲುಗಳಲ್ಲಿ ಭರ್ತಿಯಾಗಿದ್ದ ಕೈದಿಗಳ ಪ್ರಮಾಣವನ್ನು ಶೇ 110ರಿಂದ ಶೇ 96ಕ್ಕೆ ತಗ್ಗಿಸಲಾಗಿದೆ ಎಂದು ಇಲಾಖೆ ತಿಳಿಸಿತು.

ನಾಲ್ಕು ಕೇಂದ್ರ ಕಾರಾಗೃಹಗಳು ಹಾಗೂ ನಾಲ್ಕು ತಾಲ್ಲೂಕು ಬಂದಿ ಖಾನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಇದರಿಂದ 4,339 ಜನರನ್ನು ಹೆಚ್ಚು ವರಿಯಾಗಿ ಇರಿಸುವ ಸಾಮರ್ಥ್ಯ ದೊರಕ ಲಿದೆ. ಬಂದಿಖಾನೆಗಳ ಸ್ಥಳಾವಕಾಶ ಶೇ 29ರಷ್ಟು ಹೆಚ್ಚಲಿದೆ. ಹೊಸ ಕಾರಾ ಗೃಹಗಳ ನಿರ್ಮಾಣದ ಬಳಿಕ ಒಟ್ಟು ಸಾಮರ್ಥ್ಯ 15,083 ಜನರಿಂದ 19,422ಕ್ಕೆ ಹೆಚ್ಚಲಿದೆ ಎಂದು ಇಲಾಖೆ ನ್ಯಾಯಪೀಠಕ್ಕೆ ವಿವರ ಒದಗಿಸಿತು.

‘ಮಾರ್ಚ್‌ 23ರ ವೇಳೆಗೆ ಬೆಂಗ ಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಒಟ್ಟು ಸಾಮರ್ಥ್ಯಕ್ಕೆ ಹೋಲಿಸಿದರೆ ಶೇ 134ರಷ್ಟು ಕೈದಿಗಳನ್ನು ಇರಿಸಲಾಗಿತ್ತು. ಆ ಬಳಿಕ 760 ಕೈದಿಗಳನ್ನು ಇರಿಸಬಹುದಾದ ಹೊಸ ವಿಭಾಗ ಬಳಕೆಗೆ ಲಭಿಸಿದೆ. ಈಗ ಹೆಚ್ಚುವರಿ ಕೈದಿಗಳ ಸಂಖ್ಯೆಯಲ್ಲಿ ಶೇ 23ರಷ್ಟು ಕಡಿಮೆಯಾಗಿದೆ’ ಎಂದು ಇಲಾಖೆ ಹೇಳಿದೆ.

ರಾಜ್ಯದಾದ್ಯಂತ ಕಾರಾಗೃಹಗಳ ಪರಿಶೀಲನೆ ನಡೆಸಿ, ಸುಧಾರಣೆಗೆ ಸಲಹೆಯೊಂದಿಗೆ ವರದಿ ಸಲ್ಲಿಸಲು ಎನ್‌ಜಿಒ ಒಂದರ ಹೆಸರು ಸೂಚಿಸುವಂತೆ ವಿಭಾಗೀಯ ಪೀಠ ಸೂಚಿಸಿತು. ಎನ್‌ಜಿಒ ಪ್ರತಿನಿಧಿಗಳು ಎಲ್ಲ ಕಾರಾಗೃಹಗಳಿಗೆ ಭೇಟಿ ನೀಡಿ, ತಪಾಸಣೆ ನಡೆಸಬೇಕು. ಕೈದಿಗಳ ಆಹಾರ ಕ್ರಮದಲ್ಲಿ ಬದಲಾವಣೆ ಮತ್ತು ಸ್ವಚ್ಛತೆ ಕುರಿತು ಸುಧಾರಣೆ ತರುವ ನಿಟ್ಟಿನಲ್ಲೂ ಸಲಹೆ ಮಾಡಬೇಕು ಎಂದು ನ್ಯಾಯಪೀಠ ಸೂಚಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು