ಬುಧವಾರ, ಮೇ 25, 2022
31 °C

ಸದಾಶಿವ ಆಯೋಗದ ವರದಿ ಜಾರಿ ಪ್ರಸ್ತಾಪ: ಗೋಣು ಅಲ್ಲಾಡಿಸಿ ಹೋದ ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಿಶಿಷ್ಟ ಜಾತಿಯ ಆಂತರಿಕ ಮೀಸಲು ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ. ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೌನವಾಗಿ ಗೋಣು ತಿರುಗಿಸಿ ನಿರ್ಗಮಿಸಿದ ಪ್ರಸಂಗ ಇಲ್ಲಿ ನಡೆಯಿತು.

ವಿಶ್ವ ಮಾದಿಗರ ನಾಲ್ಕನೇ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ನಂತರ ಸ್ಥಳದಿಂದ ತೆರಳುತ್ತಿದ್ದ ಮುಖ್ಯಮಂತ್ರಿಗಳನ್ನು ಈ ಕುರಿತು 'ಪ್ರಜಾವಾಣಿ' ಪ್ರಶ್ನಿಸಿದಾಗ ಯಾವುದೇ ಮೌಖಿಕ ಪ್ರತಿಕ್ರಿಯೆ ನೀಡಲು ನಿರಾಕರಿಸಿದರಲ್ಲದೆ, ಗೋಣು ಅಲ್ಲಾಡಿಸಿ ತೆರಳಿದರು.

ವೇದಿಕೆಯ ಮೇಲೆ ಮಾತನಾಡುತ್ತಾ, 'ನಿಮಗಾಗಿ ನನ್ನ ಮನೆಯ ಬಾಗಿಲು ಮಾತ್ರವಲ್ಲ, ಹೃದಯದ ಬಾಗಿಲು ಕೂಡಾ ಸದಾ ತೆರೆದಿರುತ್ತದೆ' ಎಂದು ಸಮಾವೇಶದಲ್ಲಿ ಭಾವುಕ ನುಡಿಗಳನ್ನಾಡಿದರು.

ಇದನ್ನೂ ಓದಿ:

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು