ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಅವಹೇಳನ: ಮೌಂಟ್ ಕಾರ್ಮೆಲ್‌ ಕಾಲೇಜಿಗೆ ನೋಟಿಸ್‌

Last Updated 5 ಮಾರ್ಚ್ 2023, 19:57 IST
ಅಕ್ಷರ ಗಾತ್ರ

ಬೆಂಗಳೂರು: ಅಂಬೇಡ್ಕರ್‌ ಹಾಗೂ ದಲಿತ ಸಮುದಾಯ ನಿಂದಿಸುವ ಸಂಭಾಷಣೆಯ ಕಿರು ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದ್ದ ಆರೋಪದ ಮೇಲೆ ಮೌಂಟ್ ಕಾರ್ಮೆಲ್ ಕಾಲೇಜಿಗೆ (ಎಂಸಿಸಿ) ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಈ ಹಿಂದೆ ಜೈನ್‌ ಕಾಲೇಜಿನಲ್ಲಿ ವಿವಾದಾತ್ಮಕ ಕಿರು ನಾಟಕ ಪ್ರದರ್ಶಿಸಿದ್ದ ‘ದಿ ಡೆಲ್ರಾಯ್ಸ್ ಬಾಯ್ಸ್’ ಎಂಬ ತಂಡವೇ
ಮೌಂಟ್ ಕಾರ್ಮೆಲ್ ಕಾಲೇಜಿನ ಯುವಜನೋತ್ಸವದಲ್ಲೂ ಪ್ರದರ್ಶಿಸಿತ್ತು.

‘ಅಂಬೇಡ್ಕರ್‌ ಅವರ ವಿರುದ್ಧ ಬಳಸಲಾದ ಪದಗಳು ಆಕ್ಷೇಪಾರ್ಹವಾಗಿ ಒಂದು ವರ್ಗದ ಜನರಿಗೆ ನೋವುಂಟು ಮಾಡಿವೆ ಎಂಬ ಆರೋಪದ ಮೇಲೆ ಹಿಂದೆ ಜೈನ್‌ ವಿಶ್ವವಿದ್ಯಾಲಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈಗ ವಿವರಣೆ ಕೇಳಿ ಮೌಂಟ್ ಕಾರ್ಮೆಲ್ ಕಾಲೇಜಿಗೂ ನೋಟಿಸ್‌ ನೀಡಲಾಗಿದೆ. ಉತ್ತರ ಬಂದ ನಂತರ ಪ್ರಕರಣ ದಾಖಲಿಸಲಾಗುವುದು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT