ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಸ್‌ ಏರೊಸ್ಪೇಸ್‌–ಸ್ಪಿಯರ್‌ ಯುಎವಿ ಒಪ್ಪಂದ

Last Updated 4 ಫೆಬ್ರುವರಿ 2021, 20:04 IST
ಅಕ್ಷರ ಗಾತ್ರ

ಬೆಂಗಳೂರು: ಯುದ್ಧ ಮತ್ತು ಸಂದಿಗ್ಧ ಪರಿಸ್ಥಿತಿಯಲ್ಲಿ ಶತ್ರುಗಳಿಗೆ ತಿಳಿಯದಂತೆ ದಾಳಿ ನಡೆಸಲು ಸಹಕಾರಿಯಾಗುವ, ಪರಿಣಾಮಕಾರಿ ಡ್ರೋನ್‌ ವ್ಯವಸ್ಥೆಯನ್ನು ಒಳಗೊಂಡಿರುವ ಮಾನವ ನಿಯಂತ್ರಿತ ‘ನಿನಾಕ್ಸ್‌ 40’ ಸಿಸ್ಟಂ ಅನ್ನು ಭಾರತದಲ್ಲಿ ಪರಿಚಯಿಸಲು ಪಾರಸ್‌ ಏರೊಸ್ಪೇಸ್‌ ಸಂಸ್ಥೆಯು ಮುಂದಾಗಿದೆ.

ಇದಕ್ಕಾಗಿ ಇಸ್ರೇಲ್‌ನ ಸ್ಪಿಯರ್‌ ಯುಎವಿ ಸಂಸ್ಥೆಯೊಂದಿಗೆ ಗುರುವಾರ ಒಪ್ಪಂದ ಮಾಡಿಕೊಂಡಿದೆ.

ವಿಶೇಷವಾಗಿ ವಿನ್ಯಾಸಗೊಳಿಸಿರುವ, 250 ಗ್ರಾಂ ತೂಕದ ಈ ಯುದ್ಧ ಪರಿಕರವನ್ನು ಶತ್ರು ರಾಷ್ಟ್ರಗಳ ಮೇಲಿನ ದಾಳಿಯ ವೇಳೆ ಬಹಳ ಸುಲಭವಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಬಹುದಾಗಿದೆ. ಇದು ಸ್ವಯಂಚಾಲಿತ ಟ್ರ್ಯಾಕಿಂಗ್‌ ವ್ಯವಸ್ಥೆಯನ್ನೂ ಒಳಗೊಂಡಿದೆ.

‘ಭಾರತದ ರಕ್ಷಣಾ ವಲಯವು ಅಂತರರಾಷ್ಟ್ರೀಯ ಗಡಿಗಳ ಮೇಲೆ ನಿಗಾ ಇಡುವುದು ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸೇನಾಪಡೆ, ಅರೆಸೇನಾ ಪಡೆ, ಆಂತರಿಕ ಭದ್ರತೆ ಹಾಗೂ ಕಾನೂನು ಪಾಲನಾ ಸಂಸ್ಥೆಗಳ ಬಳಕೆಗಾಗಿ ನಾವು‘ನಿನಾಕ್ಸ್‌ 40’ ಸಿಸ್ಟಂ ಅಭಿವೃದ್ಧಿಪಡಿಸುತ್ತಿದ್ದೇವೆ. ಪಾರಸ್‌ ಏರೊಸ್ಪೇಸ್‌ ಜೊತೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ಖುಷಿಯಾಗಿದೆ. ಇದರಿಂದ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯವೂ ಬಲಗೊಳ್ಳಲಿದೆ’ ಎಂದು ಸ್ಪಿಯರ್‌ ಯುಎವಿ ಸಂಸ್ಥೆಯ ಸಿಇಒ ಯಿಶಾಯ್‌ ಅಮೀರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT