ಮಂಗಳವಾರ, ಅಕ್ಟೋಬರ್ 26, 2021
20 °C

ಕಂಡವರ ಮೇಲೆ ಹಲ್ಲೆ ಮಾಡುವುದು, ಕೊಲ್ಲುವುದು ಕಾಂಗ್ರೆಸ್‌ನ ಚಾಳಿಯಲ್ಲವೇ: ಬಿಜೆಪಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಂಡವರ ಮೇಲೆ ಹಲ್ಲೆ ಮಾಡುವುದು, ಕೊಲ್ಲುವುದು ಕಾಂಗ್ರೆಸ್‌ ಪಕ್ಷದ ಹಳೆಯ ಚಾಳಿಯಲ್ಲವೇ’ ಎಂದು ಬಿಜೆಪಿ ಟೀಕಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆ ಪ್ರಸ್ತಾಪಿಸಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಡಿ.ಕೆ.ಶಿವಕುಮಾರ್‌ ಅವರೇ, ಜನರು ಈಗಾಗಲೇ ನಿಮ್ಮ ಹಾಗೂ‌ ನಿಮ್ಮ ಪಕ್ಷದ ಮುಖಂಡರ ಭಾವಚಿತ್ರ ತೆಗೆದುಕೊಳ್ಳಲಾರಂಭಿಸಿದ್ದಾರೆ. ಕಂಡ ಕಂಡವರ ಮೇಲೆ ಹಲ್ಲೆ ಮಾಡುವುದು, ಕೊಲ್ಲುವುದು ನಿಮ್ಮ ಪಕ್ಷದ ಹಳೆಯ ಚಾಳಿಯಲ್ಲವೇ? ಸಾವಿರಾರು ಮುಗ್ದ ಸಿಖ್ಖರಿಗೂ, ನಾವು ಕಾಂಗ್ರೆಸ್ಸಿಗರಿಂದ ಕೊಲ್ಲಲ್ಪಡುತ್ತೇವೆ ಎಂಬ ಸುಳಿವಿರಲಿಲ್ಲ’ ಎಂದು ತಿರುಗೇಟು ನೀಡಿದೆ.

‘ಬಿಜೆಪಿ ನಾಯಕರ ಕಾರು ನಿಮ್ಮ ಪಕ್ಕದಲ್ಲಿ ಹೋಗುವಾಗ ನಿಮ್ಮ ಫೋನ್ ಕ್ಯಾಮರಾದಿಂದ ರೆಕಾರ್ಡ್ ಮಾಡಿಕೊಳ್ಳಿ...’ ಎಂದು ಡಿ.ಕೆ ಶಿವಕುಮಾರ್‌ ಅವರು ಗುರುವಾರ ಬಿಜೆಪಿಯನ್ನು ವ್ಯಂಗ್ಯವಾಡಿದ್ದರು.

ಇದಕ್ಕೆ ತಿರುಗೇಟು ಕೊಟ್ಟಿರುವ ಬಿಜೆಪಿ, ‘ಶಿವಕುಮಾರ್‌ ಅವರೇ, ನಿಮ್ಮ ಬಳಿ ಬರುವವರು ಏನು ಮಾಡಬೇಕು? ತಲೆಗೆ ಹೆಲ್ಮೆಟ್‌ ಧರಿಸಿಕೊಂಡು ಬರಬೇಕೇ?’ ಎಂದು ವಿಡಿಯೊವೊಂದನ್ನು ಟ್ವೀಟ್ ಮಾಡಿದೆ.

ಇದನ್ನೂ ಓದಿ... ಬಿಜೆಪಿ ನಾಯಕರ ಕಾರು ಹಾದು ಹೋಗುವಾಗ ರೆಕಾರ್ಡ್‌ ಮಾಡ್ಕೊಳ್ಳಿ: ಡಿಕೆಶಿ ಮನವಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು