ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌: 30ರಂದು ಪ್ರಾಥಮಿಕ ಸುತ್ತಿನ ಸ್ಪರ್ಧೆ

ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌
Last Updated 28 ಜನವರಿ 2021, 19:35 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌’ ಈ ಬಾರಿ ಕೆಲವು ಬದಲಾವಣೆಗಳೊಂದಿಗೆ ನಡೆಯಲಿದೆ. ವಲಯ ಮಟ್ಟದ ಪ್ರಾಥಮಿಕ ಸುತ್ತು, ಫೈನಲ್‌ ಹಾಗೂ ‘ಗ್ರ್ಯಾಂಡ್‌ ಫಿನಾಲೆ’ ಆನ್‌ಲೈನ್‌ನಲ್ಲೇ ನಡೆಯಲಿದೆ.

5 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು. ಈ ಬಾರಿ ತಂಡಗಳು ಇರುವುದಿಲ್ಲ. ವೈಯ ಕ್ತಿಕವಾಗಿ ಪಾಲ್ಗೊಳ್ಳಬೇಕು. ಬೆಂಗಳೂರು ವಲಯ ಮಟ್ಟದ ಪ್ರಾಥಮಿಕ ಸುತ್ತಿನ ಸ್ಪರ್ಧೆಯು ಜ. 30ರಂದು ನಡೆಯಲಿದೆ. ಈ ಸ್ಪರ್ಧೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಬಹುದು.

ಪ್ರಾಥಮಿಕ ಸುತ್ತಿನಲ್ಲಿ ವಿಜೇತ ರಾದವರು ಫೆ. 12ರಂದು ನಡೆಯ ಲಿರುವ ವಲಯ ಮಟ್ಟದ ಫೈನಲ್‌ಗೆ ಅರ್ಹತೆ ಪಡೆಯುವರು. ಅಲ್ಲಿ ಗೆದ್ದವರು ಫೆ. 20ರಂದು ನಡೆಯಲಿರುವ ಗ್ರ್ಯಾಂಡ್‌ ಫಿನಾಲೆಯಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಾರೆ.

ಪ್ರಾಥಮಿಕ ಸುತ್ತು ಸಂಜೆ 5 ರಿಂದ ರಾತ್ರಿ 8ರ ವರೆಗೆ (ಸ್ಪರ್ಧೆಯ ಅವಧಿ 35 ನಿಮಿಷ) ನಡೆಯಲಿದೆ. ಈ ಅವಧಿಯೊಳಗೆ ಲಾಗಿನ್‌ ಆಗಿ ಪಾಲ್ಗೊಳ್ಳಬಹುದು.
ಜ. 30ರ ಸಂಜೆ 4 ಗಂಟೆಯ ಒಳಗಾಗಿ ಹೆಸರು ನೋಂದಾಯಿಸಬೇಕು. ಎಷ್ಟು ಮಂದಿ ಬೇಕಾದರೂ ಭಾಗವಹಿಸಬಹುದು. ಇದರ ಜೊತೆಗೆ ಇರುವ ಕ್ಯೂಆರ್‌ ಕೋಡ್ ಸ್ಕ್ಯಾನ್‌ ಮಾಡಬಹುದು ಅಥವಾ https://quiz.prajavani.net ಮೂಲಕ ನೋಂದಣಿ ಮಾಡ ಬಹುದು.ಮಾಹಿತಿಗೆ ಮೊ: 73380 18541 ಸಂಪರ್ಕಿಸಿ.

ಭಾಗವಹಿಸುವ ವಿಧಾನ

ವಿದ್ಯಾರ್ಥಿಗಳು ಮೊದಲು ತಮ್ಮ ವಲಯದ ಪ್ರಾಥಮಿಕ ಸುತ್ತಿನ ಸ್ಪರ್ಧೆಗೆ ಹೆಸರು ನೋಂದಾಯಿಸಬೇಕು. ರಾಜ್ಯದಾದ್ಯಂತ ಒಟ್ಟು ಏಳು ವಲಯಗಳಲ್ಲಿ (ಮೈಸೂರು, ಮಂಗಳೂರು, ದಾವಣಗೆರೆ, ಧಾರವಾಡ, ಕಲಬುರ್ಗಿ, ತುಮಕೂರು, ಬೆಂಗಳೂರು) ಸ್ಪರ್ಧೆ ನಡೆಯಲಿದೆ.

ವಲಯಮಟ್ಟದ ಪ್ರಾಥಮಿಕ ಸುತ್ತಿನಿಂದ 6 ಮಂದಿ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳುವರು. ಅಲ್ಲಿ ಗೆದ್ದ ಒಬ್ಬರು ‘ಗ್ರಾಂಡ್‌ ಫಿನಾಲೆ’ಗೆ ಆಯ್ಕೆಯಾಗುವರು. ರಾಜ್ಯದ ಏಳು ವಲಯಗಳ ಏಳು ಮಂದಿ ವಿಜೇತರಿಗೆ ಫೆ. 20 ರಂದು ‘ಗ್ರಾಂಡ್‌ ಫಿನಾಲೆ’ ನಡೆಯಲಿದೆ. ‘ಗ್ರಾಂಡ್‌ ಫಿನಾಲೆ’ಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದವರಿಗೆ ಕ್ರಮವಾಗಿ ₹ 25 ಸಾವಿರ, ₹ 15 ಮತ್ತು ₹ 10 ಸಾವಿರ ನಗದು ಬಹುಮಾನ ದೊರೆಯಲಿದೆ. ವಲಯ ಮಟ್ಟದ ವಿಜೇತರಿಗೂ ನಗದು ಬಹುಮಾನ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT