ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಯೊಬ್ಬರು ಡ್ರಗ್‌ ಪ್ರಕರಣದ ಮಾಸ್ಟರ್‌ ಮೈಂಡ್‌: ಪ್ರಶಾಂತ್‌ ಸಂಬರಗಿ

Last Updated 8 ಸೆಪ್ಟೆಂಬರ್ 2021, 10:07 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್‌ಪ್ರಕರಣಗಳನ್ನು ಮತ್ತೆ ತೆರೆದು ತನಿಖೆಗೆ ಒಳಪಡಿಸಬೇಕು. ಶೀಘ್ರವೇ ಈ ಪ್ರಕರಣದ ಹಿಂದಿರುವ ಮಾಸ್ಟರ್‌ ಮೈಂಡ್‌ ಹೊರಗೆ ಬರುತ್ತಾರೆ. ಅವರು ಸಿನಿಮಾ ನಿರ್ಮಾಪಕ, ವಿತರಕ, ರಾಜಕಾರಣಿಯೂ ಆಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್‌ ಸಂಬರಗಿ ಹೇಳಿದರು.

ನವೆಂಬರ್‌ 1ರಂದು ನಶೆಯೆಂದರೆ ಎಂಬ ವಿಡಿಯೋ ಹಾಡು ಮತ್ತು ‘ಶುಗರ್‌ ಡ್ಯಾಡಿ’ ಪುಸ್ತಕ ಬಿಡುಗಡೆ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಡ್ರಗ್‌ ಜಾಲಕ್ಕೆ ಒಳಗಾಗಿ ತೊಂದರೆಗೊಳಗಾದವರು, ಆ ಜಾಲದಿಂದ ಮುಕ್ತರಾದವರೂ ಇರಲಿದ್ದಾರೆ ಎಂದು ಹೇಳಿದರು.

ನಟಿಯರಷ್ಟೇ ಅಲ್ಲ. ನಟರೂ ಡ್ರಗ್ ತೆಗೆದುಕೊಂಡಿದ್ದಾರೆ. ಪಾರ್ಟಿ ಮೋಜಿಗೆ ಮಾಡಿದ್ದಾರೆ. ಆದರೆ, ಮರು ಮಾರಾಟ ಮಾಡಿಲ್ಲ. ತೆಗೆದುಕೊಂಡಿರುವುದೂ ತಪ್ಪೇ. ಆದರೆ, ನಟಿಯರು ಅದನ್ನು ಮರು ಮಾರಾಟ ಮಾಡಿ ದುಡ್ಡಿನಾಸೆಗೆ ಬಿದ್ದು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಸಂಬರಗಿ ಹೇಳಿದರು.

‘3300 ಕೇಸ್‌ಗಳನ್ನು ಸಿಸಿಬಿಯವರು ದಾಖಲಿಸಿದ್ದಾರೆ. 2020 ಮತ್ತು 2021ರಲ್ಲಿ ಇದರಲ್ಲಿ ಏರಿಕೆ ಆಗಿದೆ.ಮಕ್ಕಳು, ಯುವಕರ ಮೇಲೆ ಅಪರಾಧ ಪ್ರಕರಣಗಳು ದಾಖಲಾಗಿವೆ.ಅಂಥವರ ವಿರುದ್ಧ ಪೋಷಕರೇ ಖುದ್ದಾಗಿ ದೂರು ನೀಡಿರುವುದು ನಡೆದಿದೆ’ ಎಂದು ಹೇಳಿದರು.

ಡ್ರಗ್‌ ಸಂಬಂಧಿಸಿ ಯಾವ ಘಟನೆಗಳು ಸಾಕ್ಷಿಗಳಿಲ್ಲದೇ ಬಚಾವಾಗಿವೆ ಎಂಬುದನ್ನು ಬರೆದಿದ್ದೇನೆ. ಫಾರ್ಮ್‌ಹೌಸ್‌ ಕಥೆಯಿಂದ ಹಿಡಿದು, ಅಪ್ಪನನ್ನು ಅಪಹರಿಸಿದ ಪ್ರಕರಣದವರೆಗೂ ‘ಶುಗರ್‌ ಡ್ಯಾಡಿ’ಯಲ್ಲಿ ಬರೆದಿದ್ದೇನೆ.ಶುಗರ್‌ ಡ್ಯಾಡಿ ಯಾರು ಎಂಬುದನ್ನೂ ಪುಸ್ತಕದಲ್ಲಿ ಬರೆದಿದ್ದೇನೆ ಎಂದರು.

ಶುಗರ್‌ಡ್ಯಾಡಿಯಲ್ಲಿ ಇದುವರೆಗೆ ಕಾಣದ ಅನೇಕ ಉಪಕಥೆಗಳು, ನಟರ ಕಥೆಗಳೂ ಇವೆ ಎಂದರು.

ಒಂದು ಚಿಕ್ಕ ವಯಸ್ಸಿನ ಯುವತಿ ತನ್ನ ತಂದೆಯ ವಯಸ್ಸಿನ ವ್ಯಕ್ತಿಯನ್ನು ಬಾಯ್‌ಫ್ರೆಂಡ್‌ ಆಗಿ ಇಟ್ಟುಕೊಂಡಿರುವುದೇ ಶುಗರ್‌ ಡ್ಯಾಡಿ ಎಂದು ಸಂಬರಗಿ ಹೇಳಿದರು.

ಡಿಐಜಿ ಪ್ರವೀಣ್‌ ಸೂದ್‌ ಅವರು ಈ ಪ್ರಕರಣದ ಮರು ತನಿಖೆ ನಡೆಸಬೇಕು. ಈ ಮರುತನಿಖೆಯಿಂದ ಅನುಶ್ರೀ ಅವರು ಕಂಬಿಹಿಂದೆ ಹೋಗುವುದು ಖಚಿತ ಎಂದರು.

ನನ್ನನ್ನು ಸ್ತ್ರೀ ವಿರೋಧಿ ಎಂದು ಹೇಳಿರುವ ಅನುಶ್ರೀ ಅವರು ಕಣ್ಣೀರು ಹಾಕುತ್ತಾ ಚೆನ್ನಾಗಿ ಅಭಿನಯಿಸಿದ್ದಾರೆ. ಅವರ ₹12 ಕೋಟಿಯ ಮಂಗಳೂರಿನ ಮನೆ, ₹ 4 ಕೋಟಿಯ ಬೆಂಗಳೂರಿನ ಮನೆ ಅವರಿಗೆ ಟಿವಿ ಲೋಕದಿಂದ ಬಂದಿದ್ದರೆ ಅವರಿಗೆ ಅಭಿನಂದನೆ ಹೇಳುತ್ತೇನೆ. ಅವರ ಹಿಂದಿರುವ ಪ್ರಭಾವಿ ವ್ಯಕ್ತಿಯ ಬಗ್ಗೆಯೂ ಗೊತ್ತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆಮಂಗಳೂರಿನಲ್ಲಿ ಅಖಿಲ್‌ ನೌಶೀಲ್‌, ಕಿಶೋರ್‌ ಅಮನ್‌ ಶೆಟ್ಟಿ, ಮಹಮದ್‌ ಶಖೀಲ್‌, ಫ್ರಾಂಕ್‌ ಸಂಡೇ ಇಬಚು, ಶಮೀನ್‌ ಫರ್ನಾಂಡೀಸ್‌, ಶಾಮ್‌ ನವಾಜ್‌ ಇಷ್ಟು ಜನರ ಹೆಸರು ಪೊಲೀಸರ ಆರೋಪಪಟ್ಟಿಯಲ್ಲಿದೆ. ಆದರೆ, ತರುಣ್‌ ಹೆಸರಿಲ್ಲ. ಈತನ ಬಗ್ಗೆಯೂ ತನಿಖೆ ಆಗಬೇಕು ಎಂದರು.

ಕಿಶೋರ್‌ ಮತ್ತು ತರುಣ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆರೋಪಪಟ್ಟಿಯಲ್ಲಿ ಅವರ ಹೆಸರು ಇಲ್ಲ. ಇದೇಕೆ ಹೀಗೆ? ಇಲ್ಲಿ ಒಬ್ಬ ನಿವೃತ್ತ ಐಪಿಎಸ್‌ ಅಧಿಕಾರಿಯ (ಗಾಂವ್ಕರ್‌) ಮಧ್ಯಸ್ಥಿಕೆಯಿಂದ ಈ ಪ್ರಕರಣ ತಿಳಿಯಾಗಿ ಹಳ್ಳ ಹಿಡಿದಿದೆ. ತರುಣ್‌ನನ್ನು ಈ ಪ್ರಕರಣದಿಂದ ಕೈಬಿಟ್ಟರೆ ಅನುಶ್ರೀ ಬಚಾವಾಗುತ್ತಾರೆ ಎಂಬ ಲೆಕ್ಕಾಚಾರ ಅಡಗಿದೆ ಎಂದು ಸಂಬರಗಿ ಹೇಳಿದರು.

ಕರ್ನಾಟಕ ಡ್ರಗ್‌ ಮುಕ್ತ ಎಂದು ಘೋಷಿಸುವುದೇ ಆದರೆ, ತರುಣ್‌ ಅವರ ಹೆಸರನ್ನು ಸೇರಿಸಬೇಕು. ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT