ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂರು ವರ್ಷಗಳ ಆಡಳಿತದ ಅವಧಿಯಲ್ಲಿ ಶೇಕಡ 40ರಷ್ಟು ಲಂಚದ ಮೂಲಕ ₹1.5 ಲಕ್ಷ ಕೋಟಿ ಲೂಟಿ ಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ವತಿಯಿಂದ ನಗರದ ಅರಮನೆ ಆವರಣದಲ್ಲಿ ಸೋಮವಾರ ಆಯೋಜಿಸಿರುವ 'ನಾ ನಾಯಕಿ' ಸಮಾವೇಶದಲ್ಲಿ ಮಾತನಾಡಿದ ಅವರು, 'ಇಲ್ಲಿನ ಸರ್ಕಾರ ಯಾವ ಕೆಲಸ ಮಾಡಿದರೂ ಶೇ 40ರಷ್ಟು ಲಂಚ ಪಡೆಯುತ್ತಿದೆ. ಜನರ ತೆರಿಗೆಯ ಹಣ ಲಂಚದ ರೂಪದಲ್ಲಿ ಸರ್ಕಾರದಲ್ಲಿರುವ ಕೆಲವರ ಜೇಬು ಸೇರುತ್ತಿದೆ' ಎಂದರು.

ಬಿಬಿಎಂಪಿಯಲ್ಲಿ ₹8,000 ಕೋಟಿ ಮೊತ್ತದ ಕಾಮಗಾರಿಗೆ ಹಣ ಬಿಡುಗಡೆ ಮಾಡಿದರೆ, ₹3,200 ಕೋಟಿ (ಶೇ 40) ಸರ್ಕಾರದಲ್ಲಿರುವವರಿಗೆ ಸಂದಾಯ ಆಗುತ್ತಿದೆ. ಜನರ ಹಣದ ಲೂಟಿ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ನಡೆದಿರುವ ಹಗರಣ ನಾಚಿಕೆಗೇಡಿನ ಸಂಗತಿ. ಬಿಜೆಪಿ ಸರ್ಕಾರವು ಪೊಲೀಸ್ ಪಡೆಗಳನ್ನೂ ಮಾರಾಟಕ್ಕೆ ಇಟ್ಟಿರುವುದಕ್ಕೆ ಸಾಕ್ಷಿ ಎಂದರು.

ವಾಹನ ಚಾಲನಾ ಪರವಾನಗಿ, ನೋಂದಣಿ ಎಲ್ಲದಕ್ಕೂ ಲಂಚ ಕೊಡಬೇಕು. ಅಧಿಕಾರಿಗಳ ನೇಮಕ, ವರ್ಗಾವಣೆ, ಸ್ಥಳ ನಿಯುಕ್ತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹೇಳಿದರು.

'ಇಂತಹ ಸರ್ಕಾರದಿಂದ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗ ದೊರಕುವ ಭರವಸೆ ಇದೆಯೆ? ಇವರಿಂದ ಭವಿಷ್ಯ ಉತ್ತಮಗೊಳ್ಳುವ ಭರವಸೆ ಇದೆಯೆ' ಎಂದು ಸಭೆಯಲ್ಲಿದ್ದ ಜನರನ್ನು ಪ್ರಶ್ನಿಸಿದರು.

ಭ್ರಷ್ಟಾಚಾರದ ವಿಷಯದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಅನೇಕ ಕಸರತ್ತು ಮಾಡುತ್ತಿದ್ದಾರೆ. ಮಕ್ಕಳ ಕಲಿಕೆಯ ಪಠ್ಯಕ್ರಮಕ್ಕೂ ಕೈ ಹಾಕಿದ್ದಾರೆ. ಬಸವಣ್ಣ ಸೇರಿದಂತೆ ಅನೇಕ ಮಹನೀಯರಿಗೆ ಸಂಬಂಧಿಸಿದ ಪಠ್ಯಗಳನ್ನು ತಿರುಚಿದ್ದಾರೆ. ಇದೆಲ್ಲವೂ ಕೆಲವರ ಆಣತಿಯಂತೆ ನಡೆದಿದೆ ಎಂದು ದೂರಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರ ಬದುಕು ದುಸ್ತರವಾಗಿದೆ. ಡಾ. ಮನಮೋಹನ್ ಸಿಂಗ್ ಸರ್ಕಾರದ ಅವಧಿಗೆ ಹೋಲಿಸಿದರೆ ಎಲ್ಪಿಜಿ ಸಿಲಿಂಡರ್ ದರ ದುಪ್ಪಟ್ಟಿಗಿಂತ ಜಾಸ್ತಿಯಾಗಿದೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.