ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಘುನಾಥ ಚ.ಹ ಕಥೆಗೆ ಚಿನ್ನದ ಪದಕ

Last Updated 29 ಅಕ್ಟೋಬರ್ 2020, 19:03 IST
ಅಕ್ಷರ ಗಾತ್ರ

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯವು ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯ ಮಟ್ಟದ ಕನ್ನಡ ಸಣ್ಣಕಥಾ ಸ್ಪರ್ಧೆಯಲ್ಲಿ‘ಸುಧಾ’ ವಾರ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಘುನಾಥ ಚ.ಹ ಅವರ ‘ಗೋರಿ’ ಕಥೆಗೆ ಚಿನ್ನದ ಪದಕ ಲಭಿಸಿದೆ.

ರೇಣುಕಾ ರಮಾನಂದ ಅವರ ‘ಬಾಳ ಪಯಣ’ ಕಥೆಗೆ ಬೆಳ್ಳಿ ಪದಕ ಮತ್ತು ಕನಕರಾಜ ಆರನಕಟ್ಟೆ ಅವರ ‘ಸ್ಟ್ಯಾಚ್ಯು ಆಫ್ ಲಿಬರ್ಟಿ’ಗೆ ಕಂಚಿನ ಪದಕ ಲಭಿಸಿದೆ.

ಮೂವರಿಗೂ ಕ್ರಮವಾಗಿ ₹5 ಸಾವಿರ, ₹3 ಸಾವಿರ ಮತ್ತು ₹2 ಸಾವಿರ ಗೌರವಧನ ಮತ್ತು ಸ್ಮರಣಿಕೆ ನೀಡಲಾಗುವುದು.

ಡಾ. ಸಿ.ನಂದಿನಿ ಅವರ ‘ಬೆಳಕಿ ನೆಡೆಗೆ’ ಕೃತಿಯು ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಗಳಿಸಿದೆ. ಇದು ₹5 ಸಾವಿರ ಗೌರವಧನ ಒಳಗೊಂಡಿದೆ.

ನವೆಂಬರ್ ಕೊನೆಯ ವಾರ ವಿಶ್ವವಿದ್ಯಾಲಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗುವುದು ಎಂದು ಕುಲಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT