ಗುರುವಾರ , ಆಗಸ್ಟ್ 18, 2022
23 °C

ಸಿ.ಡಿ. ಪ್ರಕರಣ: ವಸಂತನಗರದ ನ್ಯಾಯಾಲಯದಲ್ಲಿ ಯುವತಿ ಹೇಳಿಕೆ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿ.ಡಿ. ಪ್ರಕರಣದ ಸಂತ್ರಸ್ತೆಯಾದ ಯುವತಿ, ವಸಂತನಗರದ ಗುರುನಾನಕ್‌ ಭವನ ಬಳಿಯ ನ್ಯಾಯಾಲಯಕ್ಕೆ‌ ಹಾಜರಾಗಿದ್ದಾರೆ.

ಭದ್ರತೆ ಕಾರಣಕ್ಕಾಗಿ‌ ಮೊದಲೇ ಯೋಚಿಸಿ, ಮಾಹಿತಿಯನ್ನು ಗೌಪ್ಯವಾಗಿರಿಸಿ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಬದಲು ವಸಂತನಗರದ ನ್ಯಾಯಾಲಯಕ್ಕೆ ಯುವತಿಯನ್ನು ಕರೆಸಲಾಗಿದೆ.

ಕೊರೊನಾ ಸೋಂಕು ಹರಡುವಿಕೆ‌ ಹಿನ್ನೆಲೆಯಲ್ಲಿ ಗುರುನಾನಕ್ ಭವನ ಬಳಿ ವಿಶೇಷ ನ್ಯಾಯಾಲಯ ತೆರೆಯಲಾಗಿತ್ತು. ಅಲ್ಲಿಯೇ ಇದೀಗ ಯುವತಿಯಿಂದ ಹೇಳಿಕೆ ಪಡೆಯಲಾಗುತ್ತಿದೆ.

ಇದನ್ನೂ ಓದಿ... ಸಿ.ಡಿ.ಪ್ರಕರಣ: ಸಂತ್ರಸ್ತೆ ಯುವತಿ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು

ಇದೊಂದು ಗಂಭೀರ‌ ಪ್ರಕರಣವೆಂದು ಪರಿಗಣಿಸಿದ ನ್ಯಾಯಾಧೀಶರು, ಸ್ವತ ಕಾರಿನಲ್ಲೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ವಸಂತನಗರದ ನ್ಯಾಯಾಲಯಕ್ಕೆ ಹೋಗಿದ್ದಾರೆ.

ನ್ಯಾಯಾಧೀಶರು ಹೋಗುವ ಮುನ್ನವೇ ಯುವತಿ ಹಾಜರಾಗಿದ್ದರು. ಇದೀಗ ಯುವತಿಯಿಂದ ಹೇಳಿಕೆ ಪ್ರಕ್ರಿಯೆ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ.

ಇದನ್ನೂ ಓದಿ... ಯುವತಿ‌ ನಮಗೇ ಸಿಕ್ಕಿಲ್ಲ, ಸಿಆರ್‌ಪಿಸಿ 164 ಹೇಗೆ?: ನ್ಯಾಯಾಲಯಕ್ಕೆ ತನಿಖಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು