ಉದ್ಯಮಸ್ನೇಹಿ ರಾಜ್ಯ: ‘ಕರ್ನಾಟಕದ ಶ್ರೇಯಾಂಕ ಕುಸಿಯಲು ಹಿಂದಿನ ಸರ್ಕಾರಗಳೇ ಕಾರಣ’

ಬೆಂಗಳೂರು: ಕರ್ನಾಟಕವು ಉದ್ಯಮಸ್ನೇಹಿ ರಾಜ್ಯಗಳ ಶ್ರೇಯಾಂಕದಲ್ಲಿ ಕುಸಿತ ಕಾಣಲು ಹಿಂದಿನ ಸರ್ಕಾರಗಳ ವೈಫಲ್ಯವೇ ಕಾರಣ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ನೆರೆ ಹಾಗೂ ಕೊರೊನಾ ಪರಿಸ್ಥಿತಿ ಇದ್ದರೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ನೋಡಿಕೊಂಡಿದೆ ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ. ಮುಂದುವರಿದು, ರೈತರ ಬದುಕನ್ನು ಹಸನಾಗಿಸುವುದು ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿರುವುದರ ಉದ್ದೇಶವಾಗಿದೆ ಎಂದಿದ್ದಾರೆ.
2018-19ನೇ ಸಾಲಿನ ವರದಿ ಆಧಾರದ ಮೇಲೆ ಉದ್ಯಮಸ್ನೇಹಿ ರಾಜ್ಯಗಳ ಶ್ರೇಯಾಂಕದಲ್ಲಿ ಕರ್ನಾಟಕದ ಸ್ಥಾನ ಕುಗ್ಗಲು, ಹಿಂದೆ ಆಡಳಿತ ನಡೆಸಿದವರ ವೈಫಲ್ಯದ ಫಲ ಎಂಬುದನ್ನು ಅಂಕಿ-ಅಂಶಗಳೇ ಸಾಕ್ಷೀಕರಿಸುತ್ತಿವೆ. ನೆರೆ, ಕೊರೋನಾ ಹಾವಳಿಗಳ ನಡುವೆಯೂ ರಾಜ್ಯದಲ್ಲಿ @BSYBJP ಸರ್ಕಾರ, ಅಭಿವೃದ್ಧಿ ಕಾರ್ಯಗಳು ಹಿನ್ನಡೆ ಕಾಣಲು ಅವಕಾಶ ನೀಡಿಲ್ಲ. (1/3)
— Vijayendra Yeddyurappa (@BYVijayendra) September 6, 2020
ಭೂ-ಸುಧಾರಣ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಕರ ಬದುಕೂ ಹಸನಾಗಬೇಕು, ರಾಜ್ಯಕ್ಕೆ ಸುಲಲಿತ ಬಂಡವಾಳವೂ ಹರಿದು ಬರಬೇಕು ಎಂಬ ಉದ್ದೇಶದಿಂದ ರಾಜ್ಯಸರ್ಕಾರ ರೈತ, ಉದ್ದಿಮೆ-ಸ್ನೇಹಿ ದಿಟ್ಟಹೆಜ್ಜೆ ಇರಿಸಿದೆ. 2008ರಲ್ಲಿ @BSYBJP ಸರ್ಕಾರ ಉದ್ದಿಮೆ ವಹಿವಾಟಿನ ಪಟ್ಟಿಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿತ್ತು ಎಂಬುದನ್ನು ನೆನಪಿಸಬಯಸುವೆ. (2/3)
— Vijayendra Yeddyurappa (@BYVijayendra) September 6, 2020
ಎಷ್ಟೇ ಸಂಕಷ್ಟವಿರಲಿ, ಸವಾಲುಗಳಿರಲಿ
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿಪರ್ವದ್ದೇ ಸದ್ದು ಮೊಳಗಲಿದೆ. ಪ್ರಧಾನಿ ಶ್ರೀ @narendramodi ಯವರ ‘ಸ್ವಾವಲಂಬಿ ಭಾರತ ನಿರ್ಮಾಣ’ದ ಸಂಕಲ್ಪಕ್ಕೆ ಕರ್ನಾಟಕ ಅಗ್ರಶ್ರೇಯಾಂಕದ ಕೊಡುಗೆ ನೀಡಲಿದೆ ಎಂಬ ವಿಶ್ವಾಸ ಮುಖ್ಯಮಂತ್ರಿ ಶ್ರೀ @BSYBJP ಆಡಳಿತಶೈಲಿ ಬಲ್ಲವರದ್ದಾಗಿದೆ. (3/3)— Vijayendra Yeddyurappa (@BYVijayendra) September 6, 2020
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.