ಶನಿವಾರ, ಮೇ 28, 2022
21 °C

ಗಣರಾಜ್ಯೋತ್ಸವ ಪರೇಡ್‌–ಮೈಸೂರು ವಿದ್ಯಾರ್ಥಿನಿ ನೇತೃತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಮಹಾರಾಣಿ ವಿಜ್ಞಾನ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿನಿ ಪ್ರಮೀಳಾ ಕುನ್ವರ್‌, ನವದೆಹಲಿಯ ರಾಜಪಥದಲ್ಲಿ ಬುಧವಾರ (ಜ.26) ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಎನ್‌ಸಿಸಿ ತಂಡದ ನೇತೃತ್ವ ವಹಿಸಲಿದ್ದಾರೆ.

ಪರೇಡ್‌ಗೆ ಆಯ್ಕೆಯಾಗಿರುವ ದೇಶದ ಎಲ್ಲಾ 17 ಎನ್‌ಸಿಸಿ ನಿರ್ದೇಶನಾಲಯ ಘಟಕಗಳ ಸೀನಿಯರ್‌ ವಿಂಗ್‌ ಕೆಡೆಟ್‌
ಗಳಿಗೆ ಕಮಾಂಡಿಂಗ್‌ ಲೀಡರ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅದಕ್ಕಾಗಿ ಬೆಂಗಳೂರು ಹಾಗೂ ನವದೆಹಲಿಯಲ್ಲಿ 3 ತಿಂಗಳಿಂದ ತರಬೇತಿ ಪಡೆದಿದ್ದಾರೆ.

ರಾಜಸ್ಥಾನ ಮೂಲದ ಪ್ರಮೀಳಾ ಅವರ ತಂದೆ ಪ್ರತಾಪ್‌ ಸಿಂಗ್‌, ನಗರದ ಕಾಳಿದಾಸ ರಸ್ತೆಯಲ್ಲಿ ಚಹಾ ಅಂಗಡಿ ಇಟ್ಟುಕೊಂಡಿದ್ದಾರೆ.

‘ಕಮಾಂಡರ್‌ ಆಗಿ ತಂಡ ಮುನ್ನಡೆಸಬೇಕು ಎಂಬುದು ಮಗಳ ಕನಸಾಗಿತ್ತು. ಆ ಗೌರವ ಒಲಿದಿದ್ದು, ಸತತ ಪರಿಶ್ರಮದಿಂದ ಅಂದುಕೊಂಡಿದ್ದನ್ನು ಸಾಧಿಸಿರುವ ಮಗಳಿಗೆ ಶಹಬ್ಬಾಸ್‌ ಹೇಳಬೇಕು. ವಿವಿಧ ರಾಜ್ಯಗಳನ್ನು ಪ್ರತಿನಿಧಿಸುತ್ತಿರುವ ಕೆಡೆಟ್‌ಗಳ ತಂಡದ ನಾಯಕಿಯಾಗಿ ಕರ್ನಾಟಕ ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಪ್ರತಾಪ್‌ ಸಿಂಗ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಮೀಳಾ ಸೇರಿದಂತೆ ಮೈಸೂರು ಗ್ರೂಪ್‌ನಿಂದ ಒಟ್ಟು 19 ಕೆಡೆಟ್‌ಗಳು ಪರೇಡ್‌ಗೆ ಆಯ್ಕೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು