ಭಾನುವಾರ, ಏಪ್ರಿಲ್ 2, 2023
31 °C

ಕೋವಿಡ್‌ನಿಂದ ರೈತರ ಸಾವು: '10 ಸಾವಿರ ಕೃಷಿಕರ ₹79.47 ಕೋಟಿ ಸಾಲ ಮನ್ನಾ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಪೆಕ್ಸ್, ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳಲ್ಲಿ ಸಾಲ ಪಡೆದಿದ್ದ, ಕೊರೋನಾದಿಂದ ಮೃತಪಟ್ಟಿರುವ 10,187 ರೈತರ ₹ 79.47 ಕೋಟಿ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದು, ಇನ್ನು 3–4 ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ಈ ಸಂಬಂಧ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಸಭೆ ಸೇರಿ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೇವೆ. ಕೋವಿಡ್ ಸಂಕಷ್ಟ ಕಾಲದಲ್ಲಿ ರೈತರ ಸಹಾಯಕ್ಕೆ ಬರಲು ಮುಖ್ಯಮಂತ್ರಿಗಳು ಹಾಗೂ ನಮ್ಮ ಸರ್ಕಾರವು ಸದಾ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಇನ್ನು ಮುಂದೂ ಸಹ ಸಾಲ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಕಳೆದ ವರ್ಷ ಅಂದರೆ, 2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ₹ 15,300 ಕೋಟಿ  ಅಲ್ಪಾವಧಿ, ಮಧ್ಯಮಾವಧಿ ಬೆಳೆ ಸಾಲ ನೀಡುವ ಗುರಿಯನ್ನು ಹೊಂದಲಾಗಿತ್ತು. ಈ ನಿಟ್ಟಿನಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು, 25.67 ಲಕ್ಷ ರೈತರಿಗೆ ₹ 17,108 ಕೋಟಿ  ಸಾಲ ನೀಡುವ ಮೂಲಕ ಶೇ.114 ಗುರಿ ಸಾಧನೆಯನ್ನು ಮಾಡಲಾಗಿತ್ತು. ಈಗ 25.67 ಲಕ್ಷ ರೈತರಲ್ಲಿ ಕೋವಿಡ್ ನಿಂದ ಮೃತಪಟ್ಟಿರುವ 10,187 ರೈತರ ₹79.47 ಕೋಟಿ  ಸಾಲ ಮನ್ನಾ ಮಾಡುವ ಸಂಬಂಧ ಮುಖ್ಯಮಂತ್ರಿಗಳು ಚಿಂತನೆಯನ್ನು ನಡೆಸಿದ್ದಾರೆ ಎಂದು ಹೇಳಿದರು.

ಯಾವ ಜಿಲ್ಲೆಯ ಡಿಸಿಸಿ ಬ್ಯಾಂಕ್ ಗಳಲ್ಲಿ ಎಷ್ಟು ರೈತರು, ಎಷ್ಟು ಸಾಲ ಮನ್ನಾ ಎಂಬ ಮಾಹಿತಿ ಈ ಕೆಳಗಿನಂತಿದೆ.

ಜಿಲ್ಲೆ;ರೈತರ ಸಂಖ್ಯೆ;ಸಾಲ ಮನ್ನಾ ಪ್ರಮಾಣ

 ಬಾಗಲಕೋಟೆ; 672;₹ 5,42,26,261

ಬೆಳಗಾವಿ; 3334; ₹23,84,51,700

ಬಳ್ಳಾರಿ;357; ₹ 3,65,98,411

ಬೆಂಗಳೂರು;381;₹ 2,36,72,500

ಬೀದರ್;824;₹5,47,68,271

ಚಿಕ್ಕಮಗಳೂರು;113;₹2,03,86,020

ಚಿತ್ರದುರ್ಗ; 156;₹1,63,71,000

ದಾವಣಗೆರೆ;402;₹2,66,22,071

ಹಾಸನ; 454;₹2,86,42,000

ಕಲಬುರಗಿ; 224 ;₹ 8,73,8,776

ಉತ್ತರ ಕನ್ನಡ; 186 ;₹1,70,98,364

ಧಾರವಾಡ; 376; ₹ 2,07,10,455

ಕೊಡಗು;113;₹1,82,99,040

ಕೋಲಾರ; 147; ₹2,54,09,639

ಮಂಡ್ಯ; 410;₹ 2,73,28,268

ಮೈಸೂರು;281;₹3,13,99,000

ರಾಯಚೂರು; 237;₹1,92,03,700

ಶಿವಮೊಗ್ಗ;307; ₹3,27,01,000

ದಕ್ಷಿಣ ಕನ್ನಡ;152; ₹ 2,40,63,450

 ತುಮಕೂರು;307; ₹ 1,87,22,000

ವಿಜಯಪುರ; 754;₹ 5,13,40,000

ಹೀಗೆ ಒಟ್ಟು 10,187 ರೈತರ ₹79.47 ಕೋಟಿ ಸಾಲ ಮನ್ನಾ ಪ್ರಕ್ರಿಯೆ ಪಟ್ಟಿ ಸಿದ್ಧವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು