ಬೆಂಗಳೂರು: ಕೋವಿಡ್ ಕಾರಣ 2020-21ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರದ್ದು ಪಡಿಸಿರುವುದರಿಂದ, ಪರೀಕ್ಷೆ ಇಲ್ಲದೆ ಫಲಿತಾಂಶ ಪ್ರಕಟಿಸಲಾಗಿದೆ. ಪರೀಕ್ಷೆಗೆ ನೋಂದಾಯಿಸಿರುವ ಹೊಸಬರು ಮತ್ತು ಪುನರಾವರ್ತಿತರು ಸೇರಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ಪೈಕಿ, 2,239 ವಿದ್ಯಾರ್ಥಿ ಗಳು 600ಕ್ಕೆ 600 ಅಂಕ ಪಡೆ ದಿದ್ದಾರೆ. ಅಲ್ಲದೆ, 4,50,706 ವಿದ್ಯಾರ್ಥಿಗಳು ಉನ್ನತ ಶ್ರೇಣಿ (ಡಿಸ್ಟಿಂಗ್ಸನ್) ಮತ್ತು ಪ್ರಥಮ ಶ್ರೇಣಿ ಗಳಿಸಿದ್ದಾರೆ!

ಸುದ್ದಿಗೋಷ್ಠಿಯಲ್ಲಿ ಮಂಗಳ ವಾರ ಫಲಿತಾಂಶ ಪ್ರಕಟಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ‘ಈ ಫಲಿತಾಂಶದಿಂದ ತೃಪ್ತ ರಾಗದ ವಿದ್ಯಾರ್ಥಿಗಳು, ಇದನ್ನು ತಿರಸ್ಕರಿಸಿ ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಪರೀಕ್ಷೆಗೆ ಶುಲ್ಕ
ರಹಿತವಾಗಿ ನೋಂದಾಯಿಸಿಕೊಂಡು ಹಾಜರಾಗಬಹುದು’ ಎಂದು ಹೇಳಿದರು.

‘ಎಸ್ಸೆಸ್ಸೆಲ್ಸಿ ಅಥವಾ ಇತರ ಮಂಡಳಿಗಳ 10ನೇ ತರಗತಿಯಲ್ಲಿ ಪಡೆದ ವಿಷಯವಾರು ಅಂಕಗಳಲ್ಲಿ ಶೇ 45ರಷ್ಟು ಅಂಕ, ಪ್ರಥಮ ಪಿಯುಸಿಯಲ್ಲಿ ಪಡೆದಿರುವ ಶೇ 45ರಷ್ಟು ಅಂಕ, ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಚಟುವಟಿಕೆಗೆ ಶೇ 10ರಷ್ಟು ಅಂಕಗಳು ಮತ್ತು ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳಿಗೆ ಶೇ 5 ಕೃಪಾಂಕ ನೀಡಿ ಫಲಿತಾಂಶ ನಿರ್ಣಯಿಸಲಾಗಿದೆ’ ಎಂದರು.

‘ಪರೀಕ್ಷೆ ನೋಂದಾಯಿಸಿಕೊಂಡಿದ್ದ ಪುನರಾವರ್ತಿತ ವಿದ್ಯಾರ್ಥಿಗಳಿಗೆ ವಿಷಯಾವಾರು ಕನಿಷ್ಠ ಉತ್ತೀರ್ಣ ಅಂಕಗಳು ಮತ್ತು ವಿಷಯವಾರು ಗರಿಷ್ಠ ಅಂಕಗಳಿಗೆ ಶೇ 5ರಷ್ಟು ಕೃಪಾಂಕ ನೀಡಿ ಫಲಿತಾಂಶ ಘೋಷಿಸಲಾಗಿದೆ’ ಎಂದೂ ತಿಳಿಸಿದರು.

762 ಮಕ್ಕಳಿಗೂ ಪರೀಕ್ಷೆಗೆ ಅವಕಾಶ: ಈ ಬಾರಿ ದ್ವಿತೀಯ ಪಿಯುಸಿ ತರಗತಿಗಳಿಗೆ ನೋಂದಾಯಿಸಿಕೊಂಡಿದ್ದರೂ, ಪರೀಕ್ಷೆಗೆ ನೋಂದಾಯಿಸಿಕೊಳ್ಳದ ಒಟ್ಟು 762 ವಿದ್ಯಾರ್ಥಿಗಳಿಗೆ ಆಗಸ್ಟ್‌ನಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡು ಹಾಜರಾಗಲು ಅವಕಾಶ ನೀಡಲಾಗಿದೆ’ ಎಂದು ಹೇಳಿದರು.

ಫಲಿತಾಂಶ ಪಡೆಯಲು ವಿದ್ಯಾರ್ಥಿಗಳು https://karresults.nic.in ಈ ಲಿಂಕ್ ಕ್ಲಿಕ್ಕಿಸಬಹುದು.

ಆಗಸ್ಟ್‌ನಲ್ಲಿ ಪರೀಕ್ಷೆ

‘ಈ ಫಲಿತಾಂಶ ಒಪ್ಪಿಕೊಳ್ಳಲು ಇಲ್ಲವೇ ಅಥವಾ ತಿರಸ್ಕರಿಸಲು ಅವಕಾಶ ನೀಡಲಾಗಿದೆ. ತಿರಸ್ಕರಿಸುವ ವಿದ್ಯಾರ್ಥಿಗಳು ಆಗಸ್ಟ್‌ನಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಇದೇ 30 ಕೊನೆಯ ದಿನ. ಜೊತೆಗೆ, 2020-21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಖಾಸಗಿ ಅಭ್ಯರ್ಥಿಗಳಿಗೂ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಆಗಸ್ಟ್ 19ರಿಂದ ಸೆಪ್ಟೆಂಬರ್ 3ರವರೆಗೆ ನಡೆಸಲು ಉದ್ದೇಶಿಸಲಾಗಿದೆ. ಎಂದು ಸುರೇಶ್‌ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.