ಖಾಲಿ ಕುರ್ಚಿಗಳನ್ನು ತುಂಬಿಸಲು ರೋಗಿಗಳನ್ನು ಕರೆ ತಂದ ಸರ್ಕಾರ: ಕಾಂಗ್ರೆಸ್ ಕಿಡಿ

ಬೆಂಗಳೂರು: ಶಿಗ್ಗಾವಿಯಲ್ಲಿ ನಡೆದ ಸರ್ಕಾರದ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರಲಿಲ್ಲ. ಆದರೆ, ಖಾಲಿ ಕುರ್ಚಿಗಳನ್ನು ತುಂಬಿಸಲು ಸರ್ಕಾರವು ಆಸ್ಪತ್ರೆಗೆ ರೋಗಿಗಳನ್ನು ಬಲವಂತವಾಗಿ ಕರೆ ತಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಗಳಿಂದ 250 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ನೆರವೇರಿಸಿದ್ದರು.
ಕಾರ್ಯಕ್ರಮದಲ್ಲಿ ರೋಗಿಗಳು ಕುಳಿತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಹರಿದಾಡಿವೆ. ಗ್ಲೂಕೋಸ್ ಅಥವಾ ಔಷಧ ನೀಡಲು ರೋಗಿಗಳ ಚುಚ್ಚಿದ್ದ ಸೂಜಿಗಳೂ ರೋಗಿಗಳ ಕೈಯಲ್ಲಿ ಇರುವುದು ವಿಡಿಯೊಗಳಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಶಿಗ್ಗಾವಿ ಆಸ್ಪತ್ರೆ ಮೇಲ್ದರ್ಜೆಗೆ: 437 ನಮ್ಮ ಕ್ಲಿನಿಕ್ ಸ್ಥಾಪನೆ –ಸಿಎಂ
ಅದರ ತುಣುಕೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್, ಖಾಲಿ ಕುರ್ಚಿಗಳನ್ನು ತುಂಬಿಸಲು ಸರ್ಕಾರವು ಅತ್ಯಂತ ಅಮಾನವೀಯ ಹಾಗೂ ಕೀಳು ಹಂತಕ್ಕೆ ಇಳಿದಿದೆ. ಆಸ್ಪತ್ರೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಬಲವಂತವಾಗಿ ಕರೆತಂದಿದ್ದೀರಲ್ಲ ಬಸವರಾಜ ಬೊಮ್ಮಾಯಿ ಅವರೇ, ನಿಮಗೆ ಕನಿಷ್ಠ ಮಾನವೀಯತೆ, ಅಂತಃಕರಣ ಇಲ್ಲದಾಯಿತೆ? ಖಾಲಿ ಕುರ್ಚಿಗಳು ನಿಮ್ಮನ್ನು ಆ ಪರಿ ಕಂಗೆಡಿಸಿದೆಯೇ? ಎಂದು ಪ್ರಶ್ನಿಸಿದೆ.
ಖಾಲಿ ಕುರ್ಚಿಗಳನ್ನ ತುಂಬಲು ಸರ್ಕಾರ ಅತ್ಯಂತ ಅಮಾನವೀಯ ಹಾಗೂ ಕೀಳು ಹಂತಕ್ಕೆ ಇಳಿದಿದೆ.
ಶಿಗ್ಗಾವಿಯಲ್ಲಿ ಆಸ್ಪತ್ರೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನ ಬಲವಂತವಾಗಿ ಕರೆತಂದಿದ್ದೀರಲ್ಲ @BSBommai ಅವರೇ,
ನಿಮಗೆ ಕನಿಷ್ಠ ಮಾನವೀಯತೆ, ಅಂತಃಕರಣ ಇಲ್ಲದಾಯಿತೆ?ಖಾಲಿ ಕುರ್ಚಿಗಳು ನಿಮ್ಮನ್ನು ಆ ಪರಿ ಕಂಗೆಡಿಸಿದೆಯೇ? pic.twitter.com/9fombxNLEg
— Karnataka Congress (@INCKarnataka) December 5, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.