ಕಾಂಗ್ರೆಸ್ಸಿಗರೇ, ಇವಿಎಂ ತೋರಿಸಿ ಸೋಲನ್ನು ಮುಚ್ಚಿಕೊಳ್ಳುವುದು ನಿಲ್ಲಿಸಿ: ಬಿಜೆಪಿ

ಬೆಂಗಳೂರು: ಕಾಂಗ್ರೆಸ್ಸಿಗರು ಇನ್ನು ಮೇಲಾದರೂ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತೋರಿಸಿ ನಿಮ್ಮ ಸೋಲನ್ನು ಮುಚ್ಚಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ಕಿಡಿಕಾರಿದೆ.
ಇತ್ತೀಚೆಗೆ ವಿದ್ಯುನ್ಮಾನ ಮತಯಂತ್ರಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ಹೇಳಿಕೆ ಉಲ್ಲೇಖಿಸಿ ಬಿಜೆಪಿ ಟ್ವೀಟ್ ಮಾಡಿದೆ.
‘ಕಾಂಗ್ರೆಸ್ಸಿಗರೇ, ಸೋಲಿನ ವಾಸನೆ ಬಡಿಯುತ್ತಿದ್ದಂತೆ ಇವಿಎಂ ಸರಿ ಇಲ್ಲ ಅಂತ ಬೊಬ್ಬೆ ಹೊಡೆಯುತ್ತೀರಿ. ಇವಿಎಂ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ರಂಪ ಮಾಡುತ್ತೀರಿ. ಹೀಗೆ ಮಾಡಿದವರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಇನ್ನು ಮೇಲಾದರೂ ಇವಿಎಂನ ತೋರಿಸಿ ನಿಮ್ಮ ಸೋಲನ್ನು ಮುಚ್ಚಿಕೊಳ್ಳುವುದನ್ನು ನಿಲ್ಲಿಸಿ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಇವಿಎಂ ತಿರುಚಲಾಗಿದೆ ಎಂದು ‘ಆಧಾರರಹಿತ ಹೇಳಿಕೆ’ ನೀಡುವವವರಿಗೆ, ಅದರ ಪ್ರತಿಕೂಲ ಪರಿಣಾಮಗಳ ಅರಿವೂ ಇರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿತ್ತು.
ಪ್ರಿಯ @INCIndia ಸೋಲಿನ ವಾಸನೆ ಬಡಿಯುತ್ತಿದ್ದಂತೆ ಇವಿಎಂ ಸರಿ ಇಲ್ಲ ಅಂತ ಬೊಬ್ಬೇ ಹೊಡೆಯುತ್ತೀರಿ. ಇವಿಎಂ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ರಂಪ ಮಾಡುತ್ತೀರಿ. ಹೀಗೆ ಮಾಡಿದವರಿಗೆ ನಿನ್ನೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.
ಇನ್ನು ಮೇಲಾದರೂ ಇವಿಎಂನ ತೋರಿಸಿ ನಿಮ್ಮ ಸೋಲನ್ನು ಮುಚ್ಚಿಕೊಳ್ಳುವುದನ್ನು ನಿಲ್ಲಿಸಿ ಕಾಂಗ್ರೆಸ್ಸಿಗರೇ. pic.twitter.com/XGC0LcynH6
— BJP Karnataka (@BJP4Karnataka) November 30, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.