ಬೆಂಗಳೂರು: ತಬ್ಲೀಗ್ ಜಮಾತ್ ಸಮಾವೇಶದ ಅಂಗವಾಗಿ ರಾಜ್ಯದಲ್ಲಿದ್ದ ಒಂಬತ್ತು ವಿದೇಶಿಯರ(ದಕ್ಷಿಣ ಆಫ್ರಿಕಾ ಮತ್ತು ಇಂಡೋನೇಷ್ಯಾದವರು)ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು ಪಡಿಸಿರುವ ಹೈಕೋರ್ಟ್, ಮುಂದಿನ 10 ವರ್ಷ ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂಬ ಪ್ರಮಾಣ ಪತ್ರ ಸಲ್ಲಿಸುವಂತೆ ನಿರ್ದೇಶಿಸಿದೆ.

ಸಂಬಂಧಪಟ್ಟ ಪ್ರಾಧಿಕಾರವಿಧಿಸುವ ದಂಡದ ಮೊತ್ತ ಪಾವತಿಸಿ, ಮುಂದಿನ ಹತ್ತು ವರ್ಷಗಳವರೆಗೆ ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದ ಬಳಿಕ ನಿರ್ಗಮನ ಪರವಾನಗಿ ನೀಡುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಗೆ(ಎಫ್ಆರ್ಆರ್ಒ) ಪೀಠ ನಿರ್ದೇಶನ ನೀಡಿತು.

ಕಾರ್ಯಕ್ರಮಗಳನ್ನು ಆಯೋಜಿಸುವಾಗ ವೀಸಾ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ತುಮಕೂರು ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದುಗೊಳಿಸುವಂತೆ ಸ್ಥಳೀಯರು ಸೇರಿ 16 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ವಿಚಾರಣೆ ನಡೆಸಿದರು.

‘ಪ್ರವಾಸಿ ವೀಸಾ ಪಡೆದವರು ನಿಯಮ ಉಲ್ಲಂಘಿಸಿಧಾರ್ಮಿಕ ಸಭೆಗಳಲ್ಲಿ ತಬ್ಲೀಗ್ ತತ್ವಗಳ ಪ್ರಚಾರ ಅಭಿಯಾನ ಕೈಗೊಂಡಿದ್ದರು. ವೀಸಾ ಉಲ್ಲಂಘಿಸಿದ 960 ಮಂದಿಯನ್ನು ಕೇಂದ್ರ ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿದೆ’ ಎಂದು ವಿಶೇಷ ಅಭಿಯೋಜಕರು ತಿಳಿಸಿದರು.

‘ಪ್ರಯಾಣಿಕರ ದಾಖಲೆಗಳನ್ನು ಪ್ರವಾಸಿ ವೀಸಾ ಎಂದು ಪರಿಗಣಿಸಲು ಆಗುವುದಿಲ್ಲ. ಆದ್ದರಿಂದ ಪ್ರವಾಸಿ ವೀಸಾಕ್ಕೆ ಅನ್ವಯವಾಗುವ ಷರತ್ತುಗಳು ಅರ್ಜಿದಾರರಿಗೆ ಅನ್ವಯಿಸುವುದಿಲ್ಲ’ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ವಿದೇಶಿಯರ ವಿರುದ್ಧದ ಎಫ್ಐಆರ್ ರದ್ದುಪಡಿಸಿದ ಇದೇ ಪ್ರಕರಣದ ಸಂಬಂಧ ಸ್ಥಳೀಯರ ವಿರುದ್ಧದ ಎಫ್ಐಆರ್ ರದ್ದುಗೊಳಿಸಲು ಪೀಠ ನಿರಾಕರಿಸಿತು. ಆರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.