ಶುಕ್ರವಾರ, ಆಗಸ್ಟ್ 19, 2022
22 °C

ನಮಗೆ ರಕ್ಷಣೆ ಕೊಡಿ: ಬೆಂಗಳೂರು ಪೊಲೀಸರಿಗೆ ತಮಿಳುನಾಡು ಸಚಿವರ ಪುತ್ರಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮಿಳುನಾಡಿನ ಮುಜರಾಯಿ ಸಚಿವ ಶೇಖರ್ ಬಾಬು ಅವರ ಮಗಳು ಜಯಕಲ್ಯಾಣಿ ಅವರು ಸತೀಶ್ ಕುಮಾರ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದು, ತಮಗೆ ರಕ್ಷಣೆ ನೀಡುವಂತೆ ನಗರದ‌ ಪೊಲೀಸ್ ಕಮಿಷನರ್ ಕಮಲ್‌ ಪಂತ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಜಯಕಲ್ಯಾಣಿ ಅವರು ಇತ್ತೀಚೆಗೆ ಮನೆಯಿಂದ ನಾಪತ್ತೆಯಾಗಿದ್ದರು. ಆತಂಕಗೊಂಡಿದ್ದ ತಂದೆ, ತಮಿಳುನಾಡು ಪೊಲೀಸರಿಗೆ ದೂರು ನೀಡಿದ್ದರು. ಮಗಳನ್ನು ಯಾರೋ‌ ಅಪಹರಿಸಿದ್ದಾರೆಂದು ಆರೋಪಿಸಿದ್ದರು ಇದರ‌ ಬೆನ್ನಲ್ಲೆ ಮನೆಯವರ ವಿರೋಧದ ನಡುವೆ ರಾಯಚೂರಿನ ಹಾಲಸ್ವಾಮಿ ಮಠದಲ್ಲಿ ಜಯಕಲ್ಯಾಣಿ ಅವರು ಪ್ರಿಯಕರ ಸತೀಶ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ.

ಮಠದಲ್ಲಿ ವಿವಾಹವಾದ ದಂಪತಿ, ಸೋಮವಾರ ಬೆಂಗಳೂರಿಗೆ ಬಂದು ಕಮಿಷನರ್ ಕಚೇರಿ‌ ಅಧಿಕಾರಿ ಗಳನ್ನು ಭೇಟಿಯಾಯಿತು. 'ನನಗೂ ಮತ್ತು ಪತಿಗೂ ಜೀವ ಬೆದರಿಕೆ ಇದೆ. ರಕ್ಷಣೆ ಕೊಡಿ' ಎಂದು ಜಯಕಲ್ಯಾಣಿ ಕಮಿಷನರ್ ಅವರಿಗೆ ನೀಡಿರುವ ಮನವಿಯಲ್ಲಿ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು