ಶುಕ್ರವಾರ, ಆಗಸ್ಟ್ 12, 2022
21 °C

ಹೋರಾಟದಲ್ಲಿ ದೇಶದ್ರೋಹಿಗಳು ಭಾಗಿ: ಶೋಭಾ ಕರಂದ್ಲಾಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ದೇಶವನ್ನು ಇಬ್ಭಾಗ ಮಾಡಲು, ಖಲಿಸ್ತಾನ ಪ್ರತ್ಯೇಕಿಸಲು ಸಂಚು ನಡೆಯುತ್ತಿದೆ. ಅದಕ್ಕಾಗಿ ರೈತರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ವ್ಯವಸ್ಥಿತ ಷಡ್ಯಂತ್ರ ದೇಶದ ಹೊರಗಿನಿಂದ ನಡೆಯುತ್ತಿದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಇಲ್ಲಿ ಮಂಗಳವಾರ ಆರೋಪಿಸಿದರು.

‘ಸಂಸದರಿಗೆ ಆಗಾಗ್ಗೆ ಒಂದು ‘ವಾಯ್ಸ್‌ ರೆಕಾರ್ಡ್‌’ ಬರುತ್ತದೆ. ಅದರಲ್ಲಿ ‘ನಾವು ಖಲಿಸ್ತಾನ ಚಳವಳಿ ನಾಯಕರು. ದೇಶದ ಎಲ್ಲ ಸಿಖ್ಖರು, ಪೊಲೀಸರು, ಸೈನಿಕರು ಭಾರತದ ವಿರುದ್ಧ ತಿರುಗಿ ಬೀಳಬೇಕು’ ಎಂಬ ಸಂದೇಶ ಇರುತ್ತದೆ. ನನಗೂ ಇಂಥ ರೆಕಾರ್ಡ್ ಬಂದಿದೆ’ ಎಂದರು.

‘ಸಂಚಿನ ಹಿಂದೆ ಖಲಿಸ್ತಾನ ಚಳಿವಳಿಯಲ್ಲಿ ಸಕ್ರಿಯರಾಗಿದ್ದ ಕಾರ್ಯಕರ್ತರ ಕೈವಾಡ ಇದೆ. ಚಳವಳಿಯಲ್ಲಿದ್ದ ಹಲವರು ಲಂಡನ್‌, ಕೆನಡಾ ಇತರೆಡೆ ಇದ್ದಾರೆ. ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ದೂರಿದರು.

‘ಶಾಹೀನ್‌ ಬಾಗ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟ ದಲ್ಲಿ ಭಾಗವಹಿಸಿದ್ದ ತುಕ್ಡೆ ಗ್ಯಾಂಗ್‌ನವರು, ದೇಶದ್ರೋಹಿ ಗಳು ಈಗ ಹೋರಾಟದಲ್ಲಿ ಭಾಗವಹಿಸಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು