ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್ಒಯು) ಈ ಶೈಕ್ಷಣಿಕ ವರ್ಷದಿಂದ 11 ಹೊಸ ಕೋರ್ಸ್ ಆರಂಭಿಸಲಿದೆ ಎಂದು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ತಿಳಿಸಿದರು.

ಕೆಎಸ್ಒಯು ಸ್ಥಾಪನೆಯಾಗಿ 25 ವರ್ಷವಾದ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಉನ್ನತಿಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

‘ಸಸ್ಯವಿಜ್ಞಾನ, ಪ್ರಾಣಿ ವಿಜ್ಞಾನ, ಆಹಾರ ವಿಜ್ಞಾನ, ಮಾಹಿತಿ ತಂತ್ರಜ್ಞಾನ ವಿಷಯಗಳಲ್ಲಿ ಎಂ.ಎಸ್ಸಿ ಪದವಿ, ಬಿ.ಎಸ್ಸಿ (ಜನರಲ್), ಮಾಹಿತಿ ತಂತ್ರಜ್ಞಾನ ಮತ್ತು ಗೃಹ ವಿಜ್ಞಾನ ವಿಷಯಗಳಲ್ಲಿ ಬಿ.ಎಸ್ಸಿ ಪದವಿ, ಬಿಬಿಎ, ಬಿಸಿಎ, ತೆಲುಗು ಹಾಗೂ ಶಿಕ್ಷಣ ವಿಷಯಗಳಲ್ಲಿ ಎಂ.ಎ ಕೋರ್ಸ್ ಆರಂಭಿಸಲು ಸಲ್ಲಿಸಿದ್ದ ಮನವಿಗೆ ಯುಜಿಸಿ ತಜ್ಞರ ಸಮಿತಿ ಒಪ್ಪಿಗೆ ನೀಡಿದೆ. ಈ ಸಂಬಂಧ ಅಧಿಕೃತ ಪತ್ರ ಇನ್ನೊಂದು ವಾರದಲ್ಲಿ ಬರಲಿದ್ದು, ಆ ಬಳಿಕ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗುವುದು. ಇದರೊಂದಿಗೆ ವಿಶ್ವವಿದ್ಯಾಲಯದ ಕೋರ್ಸ್ಗಳ ಸಂಖ್ಯೆ 42ಕ್ಕೆ ಏರಿಕೆಯಾಗಲಿದೆ’ ಎಂದು ಮಾಹಿತಿ ನೀಡಿದರು.

‘ವಿಶ್ವವಿದ್ಯಾಲಯಕ್ಕೆ ಈಗಾಗಲೇ ಯುಜಿಸಿಯಿಂದ 12 (ಬಿ) ಮಾನ್ಯತೆ ಲಭಿಸಿದ್ದು, ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. 2020ರ ಜುಲೈನಲ್ಲಿ 22 ಸಾವಿರ ಮಂದಿ, ಈ ವರ್ಷ ಜನವರಿಯಲ್ಲಿ 7 ಸಾವಿರ ಮಂದಿ ಪ್ರವೇಶ ಪಡೆದುಕೊಂಡಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ 40 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆಯಿದೆ’ ಎಂದರು.

‘ಬಿ.ಇಡಿ ಸೀಟುಗಳ ಸಂಖ್ಯೆಯನ್ನು 500 ರಿಂದ 2,000 ಕ್ಕೆ ಹೆಚ್ಚಿಸುವಂತೆ ಕೋರಿ ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ಸ್ ಎಜುಕೇಷನ್ಗೆ (ಎನ್ಸಿಟಿಇ) ಪತ್ರ ಬರೆಯಲಾಗಿದೆ’ ಎಂದರು.

ಅತ್ಯಾಧುನಿಕ ಸ್ಟುಡಿಯೊ: ‘ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪರಿಣಾಮಕಾರಿ ಬೋಧನೆಗಾಗಿ ಅತ್ಯಾಧುನಿಕ ಆಡಿಯೊ–ವಿಶುವಲ್ ಸ್ಟುಡಿಯೊ ನಿರ್ಮಾಣ ಆಗಿದ್ದು, ಮುಂದಿನ ವಾರ ಉದ್ಘಾಟನೆ ನಡೆಯಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.