ಭಾನುವಾರ, ಫೆಬ್ರವರಿ 5, 2023
21 °C

ಅಮೆರಿಕದ ಅಧ್ಯಕ್ಷ ಜೋ ಬೈಡನ್ ನನ್ನ ಪರಿಚಯದವರು: ಅಶೋಕ ಖೇಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: 'ಅಮೆರಿಕದ ಅಧ್ಯಕ್ಷ ಜೋ ಬೈಡನ್ ನನ್ನ ಪರಿಚಯದವರು. ಹಿಂದೆ ಜೆ.ಎಚ್‌.ಪಟೇಲ್‌ ಅವರು ಅಮೆರಿಕಕ್ಕೆ ಬಂದಾಗ ಅವರಿಗೆ ಪರಿಚಯ ಮಾಡಿಕೊಟ್ಟಿದ್ದೆ,' ಎಂದು ಬೀದರ್‌ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಶೋಕ ಖೇಣಿ ಹೇಳಿದ್ದಾರೆ. 

ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯ ಬಹಿರಂಗಪಡಿಸಿದರು. ‘ ನಾನು ಇನ್ನು ನನ್ನ ಕ್ಷೇತ್ರದಲ್ಲೇ ಉಳಿಯುವೆ. ಪತ್ನಿಗೆ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಈಗಷ್ಟೇ ಚೇತರಿಸಿಕೊಂಡಿದ್ದಾರೆ. ಮಕ್ಕಳು ಅಮೆರಿಕದಲ್ಲಿ ಇದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ನನ್ನ ಪರಿಚಯದವರು. ಹಿಂದೆ ಜೆ.ಎಚ್‌.ಪಟೇಲ್‌ ಅವರು ಅಮೆರಿಕಕ್ಕೆ ಬಂದಾಗ ಅವರಿಗೆ ಪರಿಚಯ ಮಾಡಿಕೊಟ್ಟಿದ್ದೆ. ನಾನು ಇನ್ನು ಬೀದರ್‌ ಜಿಲ್ಲೆಯಲ್ಲಿಯೇ ಉಳಿಯುವೆ’ ಎಂದು ಅವರು ತಿಳಿಸಿದರು. 

‘ಕೋವಿಡ್‌ ಕಾಣಿಸಿಕೊಂಡ ಅವಧಿಯಲ್ಲಿ ಅಮೆರಿಕದಲ್ಲಿ ಇದ್ದೆ. ಮೂರು ತಿಂಗಳು ವಿಮಾನ ಸಂಚಾರ ರದ್ದುಗೊಳಿಸಲಾಗಿತ್ತು. ಅಲ್ಲಿ ಇದ್ದರೂ ವಿಡಿಯೊ ಕಾನ್ಫರೆನ್ಸ್‌ ಮೂಲಕ ಕ್ಷೇತ್ರದ ಮುಖಂಡರ ಸಂಪರ್ಕದಲ್ಲಿ ಇದ್ದೆ. ಜನರೊಂದಿಗೆ ಸಂಪರ್ಕ ಕಡಿದುಕೊಂಡಿಲ್ಲ’ ಎಂದು ತಿಳಿಸಿದರು.

‘ತಾಲ್ಲೂಕಿನ ರಂಜೋಳಖೇಣಿಯಲ್ಲಿ ನಮ್ಮ ಪೂರ್ವಜರು ಕಟ್ಟಿದ ದೊಡ್ಡದಾದ ಮನೆ ಇದೆ. ಸ್ಥಳೀಯ ವಾಸ್ತುಶಿಲ್ಪದ ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡು ಅದಕ್ಕೆ ಒಂದಿಷ್ಟು ಹೊಸ ಸ್ಪರ್ಶ ನೀಡಲಾಗುವುದು. ಇನ್ನು ಆ ಮನೆಯಲ್ಲಿಯೇ ಉಳಿದು ಸಾರ್ವಜನಿಕರಿಗೆ ಸೇವೆ ಕೊಡಲು ನಿರ್ಧರಿಸಿದ್ದೇನೆ’ ಎಂದು ಮಾಜಿ ಶಾಸಕ ಅಶೋಕ ಖೇಣಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು