ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಮುಡಿ: ಧಾರ್ಮಿಕ ಕಾರ್ಯಕ್ರಮ ಆರಂಭ

Last Updated 27 ಮಾರ್ಚ್ 2023, 12:26 IST
ಅಕ್ಷರ ಗಾತ್ರ

ಮೇಲುಕೋಟೆ (ಮಂಡ್ಯ ಜಿಲ್ಲೆ): ಇಲ್ಲಿಯ ಚೆಲುವನಾಯಾರಣಸ್ವಾಮಿ ದೇವಾಲಯದಲ್ಲಿ ಏ.1ರಂದು ನಡೆಯಲಿರುವ ವಿಶ್ವವಿಖ್ಯಾತ ವೈರಮುಡಿ ಉತ್ಸವದ ಅಂಗವಾಗಿ ಸೋಮವಾರ ಅಂಕುರಾರ್ಪಣದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು.

ಸೋಮವಾರ ನಸುಕಿನಿಂದಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಾರ್ಚ್‌ 28ರಂದು ಗರುಡ ಧ್ವಜಾರೋಹಣದ ಮೂಲಕ ವಿಧ್ಯುಕ್ತವಾಗಿ ವೈರಮುಡಿ ಬ್ರಹ್ಮೋತ್ಸವಕ್ಕೆ ಚಾಲನೆ ದೊರೆಯಲಿದೆ. ಮಾರ್ಚ್‌ 28 ರಂದು ಕಲ್ಯಾಣೋತ್ಸವ, ಮಾರ್ಚ್‌ 29ಕ್ಕೆ ರಾಮಾನುಜಾಚಾರ್ಯರಿಗೆ ಅಭಿಷೇಕ, ಯಾಗಶಾಲಾ ಪ್ರವೇಶ, ಮಾರ್ಚ್‌ 30ರಂದು ಶ್ರೀರಾಮನವಮಿ , ಶೇಷವಾಹನೋತ್ಸವ, ಮಾರ್ಚ್‌31 ರಂದು ನಾಗವಲ್ಲಿ ಮಹೋತ್ಸವ, ಚಂದ್ರಮಂಡಲ ವಾಹನೋತ್ಸವ ನಡೆಯಲಿವೆ.

ಏ.1ರಂದು ವೈರಮುಡಿ ಉತ್ಸವ ನಡೆಯಲಿದ್ದು ಚೆಲುನಾರಾಯಣಸ್ವಾಮಿಗೆ ವಜ್ರಖಚಿತ ಕೀರಿಟ ಧಾರಣೆ ಮಾಡಲಾಗುತ್ತದೆ. ಅಂದು ಬೆಳಿಗ್ಗೆ 6.30ಕ್ಕೆ ಮಂಡ್ಯದ ಜಿಲ್ಲಾ ಖಜಾನೆಯಲ್ಲಿರುವ ವೈರಮುಡಿ ಹಾಗೂ ರಾಜಮುಡಿ ತಿರುವಾಭರಣಗಳ ಪೆಟ್ಟಿಗೆ ತೆರೆಯಲಾಗುತ್ತದೆ.

ಮಂಡ್ಯದ ಲಕ್ಷ್ಮಿಜನಾರ್ದನ ದೇಗುಲದಲ್ಲಿ ಪ್ರಥಮ ಪೂಜೆ ಸಲ್ಲಿಸಿದ ಬಳಿಕ ಮೇಲುಕೋಟೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತದೆ. ರಾತ್ರಿ 8.45ಕ್ಕೆ ಆರಂಭವಾಗುವ ವೈರಮುಡಿ ಉತ್ಸವ ಏ.2ರ ಸುಕಿನವರೆಗೂ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT