ಮಾ.8ಕ್ಕೆ ‘ಮಹಿಳಾ ದಿನದ ರಂಗ ಸಂಭ್ರಮ’
ಬೆಂಗಳೂರು: ಬೆಂಗಳೂರಿನ ಅನೇಕಾ ರಂಗ ಸಂಸ್ಥೆಯು ಮೈಸೂರಿನ ರಂಗಾಯಣದ ಸಹಯೋಗದಲ್ಲಿ ‘ಮಹಿಳಾ ದಿನದ ರಂಗ ಸಂಭ್ರಮ’ ಕಾರ್ಯಕ್ರಮವನ್ನು ಇದೇ 8ರಂದು ಮಧ್ಯಾಹ್ನ 3 ಗಂಟೆಗೆ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಕಾರ್ಯಕ್ರಮದಲ್ಲಿ ಎಂ.ಎಸ್.ಆಶಾದೇವಿ ಅಧ್ಯಕ್ಷತೆಯಲ್ಲಿ ‘ಸ್ತ್ರೀ ದನಿ–ರಂಗ ಮಾರ್ದನಿ’ ಕುರಿತು ರಂಗ ಸಂವಾದ ನಡೆಯಲಿದೆ. ರೂಮಿ ಹರೀಶ್, ಶರಣ್ಯಾ ರಾಮ್ ಪ್ರಕಾಶ್, ಲೇಖಾ ನಾಯ್ಡು, ಎಚ್.ಎಲ್.ಪುಷ್ಪಾ, ಬಿ.ವಿ.ಸಂಧ್ಯಾರಾಣಿ, ಕೆ.ಎಸ್.ವಿಮಲಾ, ಎನ್.ಮಂಗಳಾ, ಬಿ.ವಿ.ಭಾರತಿ, ಉಷಾ ಭಂಡಾರಿ, ಅನನ್ಯಾ ಕಾಸರವಳ್ಳಿ, ಮಮತಾ ಜಿ.ಸಾಗರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಸಂಜೆ 6 ಗಂಟೆಗೆ ರಂಗಾಯಣ ಹಾಗೂ ಮೈಸೂರಿನ ಮಹಿಳಾ ರಂಗ ಕಾರ್ಯಾಗಾರದ ಕಲಾವಿದೆಯರಿಂದ ‘ಕೊಡೋದಿಲ್ಲ..ಬಿಡೋದಿಲ್ಲ!’ ನಾಟಕ ಪ್ರದರ್ಶನ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.