ಬುಧವಾರ, ಆಗಸ್ಟ್ 17, 2022
28 °C

ಇನ್ನೂ ಕೆಲವು ತಿಂಗಳು ವರ್ಕ್‌ ಫ್ರಮ್‌ ಹೋಂ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ’ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳ ಉದ್ಯೋಗಿಗಳು ವರ್ಕ್‌ ಫ್ರಮ್‌ ಹೋಂ ಬದಲು ಕಚೇರಿಯಲ್ಲೇ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಲು ಆಗುವುದಿಲ್ಲ‘ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಪಕ್ಷೇತರ ಸದಸ್ಯ ಶರತ್‌ ಬಚ್ಚೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ’ಕೋವಿಡ್ ಕಾರಣದಿಂದ ವರ್ಕ್‌ ಫ್ರಮ್‌ ಹೋಂ ಮಾಡಲಾಗುತ್ತಿದೆ. ಇನ್ನೂ ಕೆಲವು ತಿಂಗಳು ಇದೇ ಪರಿಸ್ಥಿತಿ ಮುಂದುವರಿಯಲಿದೆ‘ ಎಂದರು. ’ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಉದ್ಯೋಗಗಳ ಕಾರ್ಯಕ್ಷಮತೆ ಕಡಿಮೆಯಾಗಿದೆ‘ ಎಂದು ಶರತ್‌ ಬಚ್ಚೇಗೌಡ ಹೇಳಿದರು.

’ಐಟಿ ಕಂಪನಿಗಳು ವರ್ಕ್‌ ಫ್ರಮ್‌ ಹೋಂ ಮಾಡುತ್ತಿರುವುದರಿಂದ ಟ್ಯಾಕ್ಸಿ ಮತ್ತಿತರ ಉದ್ಯಮಗಳ ಮೇಲೂ ಹೊಡೆತ ಬಿದ್ದಿದೆ. ಇದರಿಂದ ಸರ್ಕಾರಕ್ಕೆ ವರಮಾನ ಕಡಿಮೆ ಆಗಿದೆ‘ ಎಂದು ರಘುಪತಿ ಭಟ್‌ ಹೇಳಿದರು.

’ಐಟಿ ಕಂಪನಿಗಳು ಇರುವ ಪ್ರದೇಶಕ್ಕೆ ಮೊದಲು ಮೂಲಸೌಕರ್ಯ ಒದಗಿಸಿ‘ ಎಂದು ಅರವಿಂದ ಲಿಂಬಾವಳಿ ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು