ಬೆಂಗಳೂರು: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಆದರೆ, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ’ ಎಂದು ಬಿಜೆಪಿಯೊಳಗೆ ನಾಯಕತ್ವದ ಬದಲಾವಣೆಗೆ ನಡೆಯುತ್ತಿದೆ ಎನ್ನಲಾದ ಬೆಳವಣಿಗೆಗಳ ಬಗ್ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ಲೇಷಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಯಡಿಯೂರಪ್ಪ ಅವರನ್ನು ಬದಲಿಸಿ ಎಂದು ನಾವ್ಯಾರೂ ಒತ್ತಾಯ ಮಾಡಿಲ್ಲ. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದೆ. ಒಂದು ವೇಳೆ, ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದಾದರೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ಅರವಿಂದ ಬೆಲ್ಲದ್, ವಿಶ್ವನಾಥ್, ರೇಣುಕಾಚಾರ್ಯ, ಸಚಿವ ಯೋಗೀಶ್ವರ್ ವಿರುದ್ಧ ಬಿಜೆಪಿ ಹೈಕಮಾಂಡ್ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.

‘ಬಿಜೆಪಿಯಲ್ಲಿ ಮುಖ್ಯಮಂತ್ರಿ ಮತ್ತು ಹೈಕಮಾಂಡ್ ಎರಡೂ ದುರ್ಬಲ. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಬೇಡಿ ಎಂದು ಅರುಣ ಸಿಂಗ್ ಹೇಳಿದ್ದಾರೆ. ಹಾಗಾದರೆ ಬದಲಾವಣೆ ಆಗಬೇಕು ಎಂದವರ ವಿರುದ್ಧ ಏಕೆ ಕ್ರಮವಿಲ್ಲ. ಇದರಿಂದ ರವಾನೆಯಾಗುವ ಸಂದೇಶವಾದರೂ ಏನು. ಯಡಿಯೂರಪ್ಪ ಅವರೇ ಕಳಪೆ ಮುಖ್ಯಮಂತ್ರಿ. ಇನ್ನು ಬೇರೆಯವರು ಹೇಗಿರಬೇಕು’ ಎಂದೂ ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.