ನಾಗಮಂಗಲ (ಮಂಡ್ಯ): ಸಂಸದೆ ಸುಮಲತಾ ಶುಕ್ರವಾರ ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ ಕುಪಿತರಾಗಿರುವ ತಾಲ್ಲೂಕಿನ ಬಿದರಕೆರೆ ಯುವಕರು ರಂಗಮಂದಿರದಲ್ಲಿ ಹಾಕಿದ್ದ ಸುಮಲತಾ ಅವರ ಭಾವಚಿತ್ರವನ್ನು ತೆರವುಗೊಳಿಸಿದ್ದಾರೆ.

ಅಂಬರೀಷ್ ಅವರು ಸಂಸದರಾಗಿದ್ದಾಗ ನೀಡಿದ್ದ ಅನುದಾನದಲ್ಲಿ ಪಿ.ಲಂಕೇಶ್ ಅವರ ಹೆಸರಿನಲ್ಲಿ ನಿರ್ಮಿಸಿದ್ದ ರಂಗಮಂದಿರದಲ್ಲಿ ಸುಮಲತಾ ಅವರ ಫೋಟೊವನ್ನೂ ಅಳವಡಿಸಲಾಗಿತ್ತು.

ಲಂಕೇಶ್ ಪತ್ರಿಕೆಯ ಅಂಕಣಕಾರರಾಗಿದ್ದ ಬಿ.ಚಂದ್ರೇಗೌಡ ಅವರು ಪಿ.ಲಂಕೇಶ್ ಅವರ ಮೇಲಿನ ಪ್ರೀತಿ ಮತ್ತು ಅಭಿಮಾನದ ಪ್ರತೀಕವಾಗಿ ಗ್ರಾಮದಲ್ಲಿ ಲೋಕಸಭಾ ಸದಸ್ಯರ ಕ್ಷೇತ್ರಾಭಿವೃದ್ಧಿಯ ನಿಧಿಯ ಅನುದಾನದಲ್ಲಿ ಪಿ.ಲಂಕೇಶ್ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಿ ಗೌರಿ ಲಂಕೇಶ್ ಅವರಿಂದ ಉದ್ಘಾಟನೆ ಮಾಡಿಸಿದ್ದರು.

‘ಸುಮಲತಾ ಅವರಿಂದ ಪ್ರಭಾವಿತರಾಗಿದ್ದ ಯುವಕರು ಅವರ ಫೋಟೊವನ್ನು ಹಾಕಿದ್ದರು. ಈಗ ಅವರ ನಿರ್ಧಾರದಿಂದ ನೋವಾಗಿದೆ, ನಮಗೆ ಅವರು ಮೋಸ ಮಾಡಿದ್ದಾರೆ ಎಂದು ಯುವಕರು ತಿಳಿಸಿದರು. ನಾವು ಮೂಕ ಪ್ರೇಕ್ಷಕರಾಗಬೇಕಾಯಿತು’ ಎಂದು ಬಿ.ಚಂದ್ರೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.