ವಿಯೆಟ್ನಾಂ ದೇಶದ ಮೆಕಾಂಗ್ ನದಿ ಪರಿಸರದಲ್ಲಿ ಬದುಕು ಸಾವಧಾನದ ಮಂತ್ರ ಪಠಿಸುತ್ತಿದೆ. ಈ ಪರಿಸರದಲ್ಲಿ ಸುತ್ತಾಡಿದ ಲೇಖಕರು ತಮ್ಮ ಅನುಭವವನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.
ಓಡಾಡಿ ದಣಿವಾಯಿತೇ? ಎಳನೀರು ಕುಡಿಯಬನ್ನಿ...
ಮೆಕಾಂಗ್ ನದಿಯ ತೇಲುವ ಮಾರುಕಟ್ಟೆ
ಹೋ ಚಿ ಮಿನ್ ಸಿಟಿಯ ರಾತ್ರಿಯ ಮನಮೋಹಕ ನೋಟ
ಸ್ನೇಕ್ ವೈನ್!
ನೀವು ಬಗೆಬಗೆಯ ವೈನ್ ಕುಡಿದಿರಬಹುದು. ಆದರೆ, ಸ್ನೇಕ್ ವೈನ್ ಕುಡಿದಿದ್ದೀರಾ? ಅದೂ ಹಾವಿರುವ ಬಾಟಲಿಯಿಂದಲೇ ಬಾಗಿಸಿಕೊಂಡ ವೈನ್ ಅನ್ನು? ಹೌದು, ಮೆಕಾಂಗ್ ಡೆಲ್ಟಾದ ಅತ್ಯಂತ ಜನಪ್ರಿಯ ಪೇಯ ಸ್ನೇಕ್ ವೈನ್. ಹಾವು, ಚೇಳನ್ನು ಮುಳುಗಿಸಿಟ್ಟಿದ್ದ ವೈನ್‌ನ ಬಾಟಲಿಗಳನ್ನು ಕಂಡು ನಮಗೆಲ್ಲ ಗಾಬರಿಯಾಯಿತು. ಭತ್ತದಿಂದ ತಯಾರಿಸಿದ ವೈನ್‌ನಲ್ಲಿ ವಿಷಕಾರಿಯಾದ ಜೀವಂತ ಹಾವು ಹಾಕಿ, ಹುದುಗು ಬರಿಸುತ್ತಾರೆ. ವಿಶೇಷ ಗಿಡಮೂಲಿಕೆಗಳನ್ನೂ ಅದಕ್ಕೆ ಹಾಕುತ್ತಾರೆ. ಆಗ ಹಾವಿನ ವಿಷ ನಿಷ್ಕ್ರಿಯವಾಗುವುದಂತೆ. ಹಾಗೆ ತಯಾರಾದ ವೈನ್ ಆರೋಗ್ಯವನ್ನು ವೃದ್ಧಿಸುತ್ತದೆ ಎಂಬ ಪ್ರತೀತಿ ಇಲ್ಲಿನ ಜನರಲ್ಲಿದೆ. ಆದರೆ, ಇಂತಹ ವೈನ್ ಯಾವಾಗಲೂ ಸುರಕ್ಷಿತವಲ್ಲ ಎಂದು ವೈದ್ಯಲೋಕ ಎಚ್ಚರಿಸುತ್ತದೆ.
ವುಂಗ್ ತಾವ್‌ನ ಸಮುದ್ರದ ದಂಡೆಯಲ್ಲಿರವ ಬೆಟ್ಟದ ಮೇಲೆ ನಿಂತಿರುವ ಕ್ರಿಸ್ತ
ತಲುಪುವುದು ಹೇಗೆ?
ಬೆಂಗಳೂರಿನಿಂದ ಈಗ ಹೋ ಚಿ ಮಿನ್ ಸಿಟಿಗೆ ‘ವಿಯೆಟ್‌ಜೆಟ್ ಏರ್’ ವಾರಕ್ಕೆ ನಾಲ್ಕು ದಿನ (ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ) ಅಗ್ಗದ ದರದಲ್ಲಿ ನೇರ ವಿಮಾನಯಾನ ಸೌಲಭ್ಯ ಕಲ್ಪಿಸಿದೆ. ಈ ನಗರದ ಸುತ್ತಲಿನಲ್ಲೇ ಅನೇಕ ಪ್ರವಾಸಿ ತಾಣಗಳಿದ್ದು, 4–5 ದಿನಗಳ ಪ್ರವಾಸ ಯೋಜಿಸಬಹುದು.