ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಯಿದೋಣಿ | ಸ್ವಚ್ಛಂದವಾಗಿರುವುದೇ ಪ್ರೀತಿ

Last Updated 11 ಏಪ್ರಿಲ್ 2020, 6:50 IST
ಅಕ್ಷರ ಗಾತ್ರ

ಉತ್ಸಾಹ, ಚೈತನ್ಯದ ಚಿಲುಮೆಯಂತಿದ್ದ ಹುಡುಗ ಚಿಂತನ್‌. ನಾನು ಶಾಂತ ಸ್ವಭಾವದವಳು. ಅಧ್ಯಯನದತ್ತ ಗಮನಕೊಡುವ, ಕ್ಲಾಸ್‌ನಲ್ಲಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಲ್ಲಿ ಒಬ್ಬಳು. 2013ರಲ್ಲಿ ಎಂಬಿಎಯಲ್ಲಿ ನಾವು ಸಹಪಾಠಿಗಳಾದೆವು. ಮೊದಲ ಬಾರಿಯೇ ನಮ್ಮ ಮಾತುಕತೆಯು ಒಂದು ಗಂಟೆ ನಡೆದಿತ್ತು.

ಎಂಬಿಎ ನಂತರ ನಾವು ನಮ್ಮನಮ್ಮ ಕೆಲಸದಲ್ಲಿ ಮುಳುಗಿಹೋದೆವು. 2016ರಲ್ಲಿ, ಚಿಂತನ್‌ ಜನ್ಮದಿನದಂದು ಸಹಜವಾಗಿ ನಾನು ಕರೆಮಾಡಿ ಶುಭಾಶಯಗಳನ್ನು ತಿಳಿಸಿದೆ. ಒಂದು ಹೋಟೆಲ್‌ನಲ್ಲಿ ಭೇಟಿಯಾಗಲು ನಾವು ನಿರ್ಧರಿಸಿ
ದೆವು. ಅಂದು, ಮ್ಯಾನೇಜರ್ ಬಂದು, ‘ನೀವಿನ್ನು ಹೊರಡಿ, ಹೋಟೆಲ್‌ ಮುಚ್ಚಬೇಕಾಗಿದೆ’ ಎಂದು ನಯವಾಗಿ ತಿಳಿಸುವವರೆಗೂ ನಮ್ಮ ಮಾತುಕತೆ ಮುಂದುವರಿದಿತ್ತು. ಆತ ತನ್ನ ಏಕಾಂಗಿ ಪ್ರವಾಸಗಳ ಬಗ್ಗೆ ಹೇಳುತ್ತಲೇ ಅಚಾನಕ್ಕಾಗಿ ಯುರೋಪ್‌ ಪ್ರವಾಸಕ್ಕೆ ಜತೆಗೂಡುವಂತೆ ಆಹ್ವಾನ ನೀಡಿದ. ನಾನು ಒಪ್ಪಿದೆ. ನನಗೇ ಇದು ಅಚ್ಚರಿಯಾಗಿತ್ತು. ಅದಕ್ಕೂ ಮುನ್ನ ವಿಮಾನದಲ್ಲಿ ನಾನು ದೇಶೀಯ ಪ್ರವಾಸವನ್ನೂ ಮಾಡಿದವಳಲ್ಲ.

ಯುರೋಪ್‌, ದೂರ ಪ್ರವಾಸವಾಗಿದ್ದರಿಂದ ವಿಸ್ತೃತ ಯೋಜನೆ ರೂಪಿಸುವುದು ಅಗತ್ಯವಾಗಿತ್ತು. ಕಚೇರಿಯ ಕೆಲಸ ಮುಗಿಸಿ ಆತ ನನ್ನ ಮನೆಗೆ ಬರುತ್ತಿದ್ದ. ಅಮ್ಮನ ಮುಂದೆ ಕುಳಿತೇ ನಾವು ಪ್ರವಾಸದ ಯೋಜನೆ ಸಿದ್ಧಪಡಿಸುತ್ತಿದ್ದೆವು. ಮೊದಲ ಪ್ರಯತ್ನದಲ್ಲಿ ನಮ್ಮ ವೀಸಾ ಅರ್ಜಿ ತಿರಸ್ಕೃತಗೊಂಡಿತು. ಪುನಃ ಅರ್ಜಿ ಸಲ್ಲಿಸಿದೆವು. ನಮ್ಮ ಪ್ರವಾಸಕ್ಕೂ ಎರಡು ದಿನಗಳ ಹಿಂದೆಯಷ್ಟೇ ವೀಸಾ ಕೈಸೇರಿದಾಗ ಆತ ನನಗೆ ಬಿಗಿಯಾದ ಅಪ್ಪುಗೆ ನೀಡಿದ. ಅದು ನಮ್ಮಿಬ್ಬರಿಗೂ ವಿಶೇಷ ಕ್ಷಣವಾಗಿತ್ತು.

ಯುರೋಪ್‌ ನಮ್ಮ ಕನಸಿನ ಪ್ರವಾಸವಾಗಿ ಪರಿಣಮಿಸಿತು. ಆನಂತರವೂ ಆತ ನನ್ನ ಮುಂದೆ ವಿವಾಹ ಪ್ರಸ್ತಾವವನ್ನು ಇಟ್ಟಿರಲಿಲ್ಲ. ಆದರೂ, ನಾವು ಒಬ್ಬರಿಗೊಬ್ಬರು ಬದ್ಧರಾಗಿದ್ದೇವೆ ಎಂಬುದು ಇಬ್ಬರಿಗೂ ಮನ ವರಿಕೆ ಆಗಿತ್ತು. ಸುದ್ದಿ ಯನ್ನು ನಮ್ಮ ಪಾಲಕರಿಗೆ ತಿಳಿಸಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆವು. ಅವರಿಗೆ ತಿಳಿಸಿದಾಗ, ತಡಮಾಡದೆ ಒಪ್ಪಿಗೆ ಸೂಚಿಸಿದರು. ಆದರೆ,ವಿವಾಹ ಸಮಾರಂಭವನ್ನು ಸರಳವಾಗಿ ನಡೆಸಲು ಅವರ ಮನವೊಲಿಸಲು ಸಾಕಷ್ಟು ಸಮಯ ಹಿಡಿಯಿತು. ನಾವು ದೊಡ್ಡ ಪ್ರವಾಸದ ಯೋಜನೆಗಳನ್ನು ಹೊಂದಿ ದ್ದೆವು. ಅದಕ್ಕಾಗಿ ಹಣ ಮತ್ತು ರಜೆಗಳನ್ನು ಉಳಿಸುವುದು ಅಗತ್ಯವಾಗಿತ್ತು. ಅಂತಿಮವಾಗಿ, 2019ರ ನವೆಂಬರ್‌ನಲ್ಲಿ ನಾವು ಮದುವೆಯಾದೆವು. ಅದಾಗುತ್ತಿದ್ದಂತೆ 25 ದಿನಗಳ ಪ್ರವಾಸ ಹೊರಟೆವು.

ಟಿ.ವಿ. ಧಾರಾವಾಹಿ, ಸಿನಿಮಾ, ಹೋಟೆಲ್‌ನಲ್ಲಿ ಊಟ... ಎಂದೆಲ್ಲ ನಾವು ಸಮಯ ವ್ಯರ್ಥ ಮಾಡುವುದಿಲ್ಲ. ಬದಲಿಗೆ, ಯಾವ ಸ್ಥಳಕ್ಕೆ ಹೋಗಬೇಕು, ಹೇಗೆ ಪ್ರಯಾಣಿಸಬೇಕು, ಏನನ್ನು ಧರಿಸಬೇಕು, ಹಣವನ್ನು ಹೇಗೆ ಹೊಂದಿಸಬೇಕು ಎಂಬ ಬಗ್ಗೆಯೇ ಚಿಂತಿಸುತ್ತೇವೆ. ಪ್ರೀತಿಯನ್ನು ಕುರಿತ ನಮ್ಮ ಕಲ್ಪನೆ ಎಂದರೆ, ಜೀವನಪೂರ್ತಿ ಜತೆಜತೆಯಾಗಿ ಸಾಹಸಗಳನ್ನು ಮಾಡುತ್ತಿರಬೇಕು ಎಂಬುದಾಗಿದೆ. ವಿಶಿಷ್ಟವಾದ ಪ್ರದೇಶಗಳಿಗೆ ಹೋಗಿ, ಪರಸ್ಪರರ ಕೈ ಹಿಡಿದುಕೊಂಡು ಸ್ವಚ್ಛಂದವಾಗಿ ವಿಹರಿಸಲು ನಾವು ಬಯಸುತ್ತೇವೆ... ಎಂದೆಂದಿಗೂ!

ಇಮೇಲ್‌:beingyou17@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT