ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹದ ಸ್ವಾಧೀನಕ್ಕೆ ವ್ಯಾಯಾಮವೇ ಮದ್ದು

Last Updated 10 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಮೈಯಲ್ಲಿ ನಡುಕ, ಕಾಲುಗಳಲ್ಲಿ ಬಿಗಿತ, ದೇಹದ ಮೇಲಿನ ನಿಯಂತ್ರಣ ತಪ್ಪಿದಂತೆ ಭಾಸವಾಗುತ್ತಿದೆಯಾ? ಅದು ಪಾರ್ಕಿನ್ಸನ್ ಇರಬಹುದು. ಪಾರ್ಕಿನ್ಸನ್ ಎಂಬುದು ನರಸಂಬಂಧಿ ಸಮಸ್ಯೆಯಾಗಿದ್ದು, ಸುಮಾರು 50 ವರ್ಷ ಮೀರಿದ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳ
ಬಹುದು. ಯುವಕರಲ್ಲೂ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಅರಿವಿನ ಕೊರತೆಯೇ ಪಾರ್ಕಿನ್ಸನ್ ಪೀಡಿತ ವ್ಯಕ್ತಿಯನ್ನು ನಜ್ಜುಗುಜ್ಜಾಗಿಸುತ್ತದೆ. ಇದು ಮೆದುಳಿನ ಕೆಲ ಭಾಗಗಳಿಗೆ ಹಾನಿಯುಂಟು ಮಾಡುತ್ತದೆ. ಪ್ರತಿ 20 ರೋಗಿಗಳ ಪೈಕಿ ಒಬ್ಬರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬ ಮಾಹಿತಿಯೂ ಇದೆ. ಪಾರ್ಕಿನ್ಸನ್ ಬರದಂತೆ ತಡೆಯಬೇಕಾದರೆ ನಿರಂತರ ವ್ಯಾಯಾಮವೊಂದೇ ರಾಮಬಾಣ.

ಲಕ್ಷಣಗಳು: ಸಾಮಾನ್ಯವಾಗಿ ಕೈ ಇಲ್ಲವೇ ಕಾಲಿನಲ್ಲಿ ಜಡತ್ವ ವಿಶ್ರಾಂತಿಯಲ್ಲಿದ್ದಾಗ ಕೈ, ಕಾಲುಗಳಲ್ಲಿ ನಡುಕ ಶಾರೀರಿಕ ಚಲನೆ ನಿಧಾನವಾಗಬಹುದುನಿತ್ಯದ ಚಟುವಟಿಕೆ ನಡೆಸಲು ಕಷ್ಟ ಎನಿಸಬಹುದುಶರೀರದ ಸ್ನಾಯುಗಳಲ್ಲಿ ಹಿಡಿತ ಇಲ್ಲವೇ ಬಿಗಿತದ ಅನುಭವ ಚಲನ ಶೀಲತೆ, ಮುಖದ ಹಾವಭಾವಗಳಲ್ಲಿ ಬದಲಾವಣೆ

ಮಿದುಳಿನೊಳಗೆ ‘ಸಂವೇದಕ’ ಅವಳಡಿಕೆ:ಪಾರ್ಕಿನ್ಸನ್ ಸಮಸ್ಯೆ ಗಂಭೀರ ಸ್ವರೂಪದ್ದಾಗಿದ್ದರೆ ಶಸ್ತ್ರಚಿಕಿತ್ಸೆಯ ಮೊರೆ ಹೋಗಬಹುದು. ಸೌದಿ ಅರೇಬಿಯಾದ 51 ವರ್ಷದ ಪ್ರಾಧ್ಯಾಪಕರೊಬ್ಬರು ಇತ್ತೀಚೆಗೆ ಬಿಆರ್‍ಲೈಫ್ ಎಸ್‍ಎಸ್‍ಎನ್‍ಎಂಸಿ ಆಸ್ಪತ್ರೆಗೆ ಬಂದಿದ್ದರು. ದೈಹಿಕ ಚಲನೆ ಹಾಗೂ ಮಾತು ನಿಂತು ಹೋಗಿದ್ದವು. ರೋಗಿಯು ದೀರ್ಘಕಾಲೀನ ಪಾರ್ಕಿನ್ಸನ್ ಸಮಸ್ಯೆಯಿಂದ ಬಳಲುತ್ತಿದ್ದರು. ಸಮಸ್ಯೆ ಗಂಭೀರವಾಗಿರುವುದರಿಂದ ಔಷಧೋಪಚಾರ ಸಾಕಾಗುತ್ತಿರಲಿಲ್ಲ. ಹೆಚ್ಚು ಔಷಧ ನೀಡಿದರೆ ಅದು ಬೇರೆ ರೀತಿಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯಿತ್ತು. ನರರೋಗ ವಿಭಾಗದ ಹಿರಿಯ ವೈದ್ಯ ಡಾ. ವೆಂಕಟರಮಣ ಅವರು ತಕ್ಷಣ ಶಸ್ತ್ರಚಿಕಿತ್ಸೆ ನಡೆಸುವುದೇ ದಾರಿ ಎಂದು ನಿರ್ಧರಿಸಿದರು. ಡಿಬಿಎಸ್ ಶಸ್ತ್ರಚಿಕಿತ್ಸೆ (ಡೀಪ್ ಬ್ರೈನ್ ಸ್ಟಿಮ್ಯುಲೇಷನ್) ಮೂಲಕ ನರಸಂವೇದಕ ಉಪಕರಣವನ್ನು ರೋಗಿಯ ಮಿದುಳಿನಲ್ಲಿ ಅಳವಡಿಸಲಾಯಿತು. ಈ ಉಪಕರಣವು ಸರಿಯಾದ ಪ್ರಚೋದನೆಗಳನ್ನು ಮಿದುಳಿನ ನಿರ್ದಿಷ್ಟ ಭಾಗಗಳಿಗೆ ರವಾನಿಸುತ್ತದೆ. ಇದು ಸಂಕೀರ್ಣ ಶಸ್ತ್ರಚಿಕಿತ್ಸೆಯಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ರೋಗಿಯ ಚಟುವಟಿಕೆಗಳಲ್ಲಿ ಭಾರಿ ಬದಲಾವಣೆ ಕಂಡುಬಂದಿತು.

ಪಾರ್ಕಿನ್ಸನ್ ರೋಗದ ಪ್ರಮಾಣ ಭಾರತದಲ್ಲಿ ಪ್ರತಿ ವರ್ಷ ಏರಿಕೆಯಾಗುತ್ತಿದೆ. ಇದು 50 ವರ್ಷ ದಾಟಿದ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಬಿಆರ್‌ ಲೈಫ್‌ ಆಸ್ಪತ್ರೆ ಚೀಫ್ ನ್ಯೂರೊ ಸರ್ಜನ್, ಡಾ. ಎನ್.ಕೆ. ವೆಂಕಟರಮಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT