ಒಳಾಂಗಣ ಸಸ್ಯಗಳು ಎಂದರೆ ಕೇವಲ ಆಲಂಕಾರಿಕ ವಸ್ತುಗಳಲ್ಲ. ಇಡೀ ದಿನದ ಒತ್ತಡವನ್ನು ಮರೆಸಿ, ಮನಸ್ಸಿಗೆ ಮುದ ನೀಡುವಲ್ಲಿ ಈ ಸಸ್ಯಗಳ ಪಾತ್ರ ಪ್ರಮುಖವಾದುದು. ಹಸಿರನ್ನು ನೋಡುತ್ತಾ ಇದ್ದಷ್ಟೂ ಮನಸ್ಸು ನಿರಾಳವಾಗುವುದು ನಮ್ಮೆಲ್ಲರ ಅನುಭವಕ್ಕೂ ಬಂದಿರುತ್ತದೆ. ಆದರೆ, ಜನನಿಬಿಡ ಶಹರಗಳಲ್ಲಿ ಮನೆಯ ಅಂಗಳದಲ್ಲಿ ಗಿಡಮರಗಳು ಕಾಣಸಿಗುವುದು ವಿರಳ. ಅಂಥವರಿಗೆ ಮನೆ ಹಾಗೂ ಮನಸ್ಸಿನ ಪ್ರಶಾಂತತೆಯನ್ನು ಹೆಚ್ಚಿಸಿಕೊಳ್ಳಲು ಒಂದೊಳ್ಳೆ ಉಪಾಯವೆಂದರೆ, ಅದು ಒಳಾಂಗಣ ಸಸ್ಯಗಳು. ಯಾವ ಸಸ್ಯಗಳನ್ನು ಮನೆಯ ಒಳಗೆ ಉತ್ತಮವಾಗಿ ಬೆಳೆಸಬಹುದು ಎನ್ನುವ ಕೆಲವೊಂದಿಷ್ಟು ಮಾಹಿತಿ ಇಲ್ಲಿದೆ:

ಹೊಯ (ವ್ಯಾಕ್ಸ್ ಪ್ಲ್ಯಾಂಟ್): ನಕ್ಷತ್ರ ಆಕಾರದ, ಬಿಳಿ ಹೂವಿನ ಎಸಳಿನ ನಡುವೆ ಗುಲಾಬಿ ಬಣ್ಣವಿರುವ ಈ ವಿಶಿಷ್ಟ ಹೂವಿನ ಗಿಡವು ನೋಡುಗರ ಮನಸೂರೆಗೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಆಕರ್ಷಕವಾಗಿರುವ ಈ ಗಿಡವನ್ನು ಬೆಳೆಸುವುದು ಕಷ್ಟದಾಯಕವೇನೂ ಅಲ್ಲ. ಕಡಿಮೆ ಬೆಳಕಿನಲ್ಲಿ ಬೆಳೆಯಬಹುದಾದ ಈ ಸಸ್ಯಕ್ಕೆ ನೀರಿನ ಅಗತ್ಯವೂ ಕಡಿಮೆ. ವರ್ಷದಲ್ಲಿ ಹಲವು ಬಾರಿ ಹೊಯ ಗಿಡದಲ್ಲಿ ಹೂಗಳು ಅರಳುತ್ತವೆ. ಗಾತ್ರದಲ್ಲೂ ಪುಟ್ಟದಾಗಿರುವ ಈ ಗಿಡವನ್ನು ಬುಟ್ಟಿಗಳಲ್ಲಿ, ಶೆಲ್ಫ್ಗಳ ಮೇಲೆ ಇಡಲು ಅನುವಾಗುವಂತೆ ಸಣ್ಣ ಪಾಟ್ಗಳಲ್ಲೂ ಬೆಳೆಸಬಹುದು.

ಪೀಸ್ ಲಿಲ್ಲಿ: ಸೂರ್ಯನ ನೇರ ಕಿರಣಗಳಿಲ್ಲದೆ, ನೆರಳಿನಲ್ಲಿಯೂ ಬೆಳೆಯಬಹುದಾದ ಈ ಗಿಡವನ್ನು ಹಲವರು ಶುಭದಾಯಕವೆಂದೂ ಪರಿಗಣಿಸುತ್ತಾರೆ. ವರ್ಷಪೂರ್ತಿ ಎಲ್ಲ ಋತುವಿನಲ್ಲೂ ಈ ಗಿಡದಲ್ಲಿ ಬಿಳಿ, ಗುಲಾಬಿ ಬಣ್ಣದ ಹೂಗಳನ್ನು ಕಾಣಬಹುದು. ಮನೆಯಲ್ಲಿ ಸ್ವಲ್ಪ ಗಾಳಿ ಬೆಳಕಿರುವ ಜಾಗದಲ್ಲಿ ಇಟ್ಟರೂ ಸೊಂಪಾಗಿ ಬೆಳೆಯಬಲ್ಲ ಈ ಗಿಡಕ್ಕೆ ಮಣ್ಣು ಒಣಗುತ್ತಿದೆ ಎನಿಸುವಾಗ ನೀರು ಹಾಕಿದರೂ ಸಾಕು.

ಚೈನೀಸ್ ಎವರ್ಗ್ರೀನ್: ಒಳಾಂಗಣ ಹಾಗೂ ಹೊರಾಂಗಣ ಎರಡರಲ್ಲಿಯೂ ಬೆಳೆಸಬಹುದಾದ ಗಿಡ ಇದಾಗಿದ್ದು, ಮಣ್ಣು ತೇವಾಂಶ ಹೊಂದಿದ್ದರೆ ಸಾಕು. ಅತಿಯಾದ ನೀರಿನ ಅವಶ್ಯಕತೆ ಈ ಗಿಡಕ್ಕಿಲ್ಲ. ನೀರು ಹೆಚ್ಚಾದರೆ ಗಿಡದ ಕಾಂಡ ಅಥವಾ ಬೇರು ಕೊಳೆಯುವ ಸಾಧ್ಯತೆ ಇರುತ್ತದೆ. ಚಳಿಗಾಲದಲ್ಲಿ ಕಡಿಮೆ ನೀರು ಹಾಕಬೇಕು. ಗಿಡದ ಎಲೆಗಳು ಬಿಳಿ ಬಣ್ಣಕ್ಕೆ ತಿರುಗಿದರೆ, ಬೇರು ಹಿಡಿದಿಟ್ಟುಕೊಂಡಿರುವ ನೀರು ಖಾಲಿಯಾಗುತ್ತಿದೆ ಎಂದು ಅರ್ಥ. 2ರಿಂದ 3 ಅಡಿಗಳಷ್ಟು ಎತ್ತರ ಬೆಳೆಯಬಲ್ಲ ಈ ಗಿಡವು ವಿಶಿಷ್ಟ ರೂಪಿನಿಂದ ಕೂಡಿದ ತನ್ನ ಎಲೆಗಳಿಂದಲೇ ಪ್ರಸಿದ್ದಿಯಾಗಿದೆ.

ಸ್ನೇಕ್ ಪ್ಲ್ಯಾಂಟ್: ನೋಡುವುದಕ್ಕೆ ಹಾವಿನಂತೆ ಕಾಣುವ ಈ ಗಿಡವನ್ನು ಆಡುಭಾಷೆಯಲ್ಲಿ ///////ಅತ್ತೆ ನಾಲಿಗೆ ಗಿಡ ಎಂದೂ ಕರೆಯಲಾಗುತ್ತದೆ. ಮನೆಯೊಳಗೆ ಉತ್ತಮ ಬೆಳಕಿರುವ ಜಾಗದಲ್ಲಿ ಈ ಗಿಡವನ್ನು ಬೆಳೆಸಬಹುದು. ವಿಶೇಷವೆಂದರೆ, ಮಂದ ಬೆಳಕು, ಕಡಿಮೆ ನೀರಿನಲ್ಲಿಯೂ ಈ ಗಿಡ ಬೆಳೆಯಬಲ್ಲದು. 6ರಿಂದ 20 ಇಂಚುಗಳಷ್ಟು ಎತ್ತರ ಬೆಳೆಯಬಲ್ಲ ಈ ಗಿಡಕ್ಕೆ ಪ್ರತಿನಿತ್ಯ ನೀರು ಹಾಕುವ ಅಗತ್ಯವಿಲ್ಲ. ಈ ಗಿಡದ ಬೇರು ಒಮ್ಮೆಗೇ ಸಾಕಷ್ಟು ನೀರನ್ನು ಹಿಡಿದಿಟ್ಟುಕೊಳ್ಳಬಲ್ಲದು. ದಿನನಿತ್ಯ ಆರೈಕೆ ಮಾಡುವ ಅಗತ್ಯವಿಲ್ಲದ ಕಾರಣ ಆರಾಮದಾಯಕವಾಗಿ ಈ ಗಿಡವನ್ನು ಬೆಳೆಸಬಹುದಾಗಿದೆ.

ಆಲೋವೆರಾ (ಲೋಳೆಸರ): ಸಾಮಾನ್ಯವಾಗಿ ಒಳಾಂಗಣ ಹಾಗೂ ಹೊರಾಂಗಣ ಎರಡು ಕಡೆಗಳಲ್ಲೂ ಈ ಗಿಡವನ್ನು ಬೆಳೆಸಬಹುದಾಗಿದೆ. ಔಷಧಿ ತಯಾರಿಕೆ, ಸೌಂದರ್ಯವರ್ಧಕಗಳ ತಯಾರಿಕೆಯಲ್ಲೂ ಲೋಳೆಸರವನ್ನು ಬಳಸುತ್ತಾರೆ. ಗಿಡದ ಎಲೆಯಲ್ಲಿ ಲೋಳೆಯ ಅಂಶ ಹೆಚ್ಚಾಗಿರುವ ಕಾರಣ ಇದನ್ನು ಲೋಳೆಸರ ಎಂದು ಕರೆಯಲಾಗುತ್ತದೆ. 12ರಿಂದ 24 ಇಂಚುಗಳ ಎತ್ತರದವರೆಗೆ ಈ ಗಿಡಗಳು ಬೆಳೆಯಬಲ್ಲವು. ಒಮ್ಮೆಗೆ ಹೆಚ್ಚಿನ ನೀರನ್ನು ಹಾಕಿದರೆ ಸಾಕು, ಪದೇ ಪದೇ ನೀರು ಹಾಕುವ ಅಗತ್ಯವಿಲ್ಲ. ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗಿದೆ ಎನ್ನಿಸಿದಾಗ ನೀರು ಹಾಕಿದರೆ ಸಾಕು. ಸುಲಭವಾಗಿ ಈ ಗಿಡವನ್ನು ಬೆಳಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.