ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ಜಾತ್ರೆ, ಸಿಡಿ ಉತ್ಸವ

Last Updated 3 ಜನವರಿ 2018, 7:14 IST
ಅಕ್ಷರ ಗಾತ್ರ

ಮಧುಗಿರಿ: ತಾಲ್ಲೂಕು ಕೊಂಡವಾಡಿ ಚೌಡೇಶ್ವರಿ ಅಮ್ಮನವರ ದೊಡ್ಡ ಜಾತ್ರೆ ಮಹೋತ್ಸವ ಹಾಗೂ ಸಿಡಿ ಉತ್ಸವ ಕಾರ್ಯಕ್ರಮಕ್ಕೆ ತಾಲ್ಲೂಕು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಜಮಾಯಿಸಿದ್ದರು.

ಚೌಡೇಶ್ವರಿ ದೇವಿಯ ಉತ್ಸವಕ್ಕೆ ರಂಗಾಪುರ, ತಿಪ್ಪನಹಳ್ಳಿ, ಗೌಡಹಟ್ಟಿ, ಯಲ್ಕೂರು, ಹೊಸಕೋಟೆ ರಂಗಾಪುರ, ಹಳ್ಳಿಮರದಹಳ್ಳಿ ಹಾಗೂ ಹುಣಸವಾಡಿ ಗ್ರಾಮಗಳಿಂದ ದೇವಿಯ ಉತ್ಸವ ಮೂರ್ತಿಗಳನ್ನು ಕೊಂಡವಾಡಿ ಗ್ರಾಮದ ದೇವಾಲಯಕ್ಕೆ ಕರೆ ತಂದು ವಿಶೇಷ ಪೂಜೆ ಮಾಡಲಾಯಿತು.

ಮಹಿಳೆಯರು ಆರತಿಯನ್ನು ತಲೆಯ ಮೇಲೆ ಹೊತ್ತು ಸರದಿ ಸಾಲಿನಲ್ಲಿ ನಿಂತು ದೇವಿಗೆ ಪೂಜೆ ಸಲ್ಲಿಸಿದರು. ಮಧ್ಯಾಹ್ನ 3 ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯದ ಆವರಣದಲ್ಲಿ ಜಮಾಯಿಸಿ, ಸಿಡಿ ಉತ್ಸವವನ್ನು ಕಣ್ತುಂಬಿಕೊಂಡರು.

ಜಾತ್ರೆಯ ಅಂಗಡಿ ಸಾಲಿನಲ್ಲಿ ತಿಂಡಿ-ತಿನಿಸುಗಳ ಭರ್ಜರಿ ವ್ಯಾಪಾರವಾಯಿತು. ಮಕ್ಕಳು ಆಟದ ಸಾಮಾಗ್ರಿಗಳನ್ನು ಉತ್ಸಾಹದಿಂದ ಖರೀದಿಸುತ್ತಿದ್ದರು. ತುಮುಲ್ ವತಿಯಿಂದ ಮಜ್ಜಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಾಲಯ ಸಮಿತಿ ಹಾಗೂ ದಾನಿಗಳಿಂದ ಪ್ರಸಾದ ವಿತರಿಸಲಾಯಿತು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೊರಟಗೆರೆ ಕ್ಷೇತ್ರದ ಪಿ.ಆರ್.ಸುಧಾಕರ್ ಲಾಲ್, ರಾಜ್ಯ ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ, ಎಲೆರಾಂಪುರದ ಹನುಮಂತನಾಥ ಸ್ವಾಮೀಜಿ, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಆರ್.ಶಾಂತಲಾ, ಕೊಂಡವಾಡಿ ತಿಮ್ಮಯ್ಯ, ಜಿ.ಜೆ.ರಾಜಣ್ಣ, ಮಂಜುಳಾ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಂ.ವಿ.ವೀರಭದ್ರಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ, ದೇವಾಲಯ ಸಮಿತಿಯ ಗೌರವಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ರವಿಕುಮಾರ್, ಉಪಾಧ್ಯಕ್ಷರಾದ ಕೆ.ಸಿ.ನಾಗರಾಜಯ್ಯ, ಬಿ.ಸಿ.ಮಂಜುನಾಥ್, ಡಿ.ಈಶ್ವರಯ್ಯ, ಬಿ.ಎಸ್.ಶ್ರೀನಿವಾಸ್, ಎನ್.ಎನ್.ಚೌಡಪ್ಪ, ಎನ್.ಎಸ್.ಯು.ಐ ಅಧ್ಯಕ್ಷ ಸುಮುಖ್ ಚಂದ್ರಶೇಖರ್, ಪ್ರಧಾನ ಅರ್ಚಕ ಜಯರಾಮ್, ಧಾರ್ಮಿಕ ಎಂ.ಜಿ.ಶ್ರೀವಾಸ ಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT