ಗುರುವಾರ , ಜೂಲೈ 2, 2020
28 °C

ದೀಪಕ್ ಮನೆಗೆ ಶಾಸಕ ಬಾವ ಭೇಟಿ: ಕುಟುಂಬಸ್ಥರ ತರಾಟೆ, ಪರಿಹಾರ ಸ್ವೀಕರಿಸಲು ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೀಪಕ್ ಮನೆಗೆ ಶಾಸಕ ಬಾವ ಭೇಟಿ: ಕುಟುಂಬಸ್ಥರ ತರಾಟೆ, ಪರಿಹಾರ ಸ್ವೀಕರಿಸಲು ನಕಾರ

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ದೀಪಕ್‌ ರಾವ್‌ ಅವರ ಕಾಟಿಪಳ್ಳದ ನಿವಾಸಕ್ಕೆ ಶುಕ್ರವಾರ ಸಾಂತ್ವನ ಹೇಳಲು ಬಂದಿದ್ದ ಸ್ಥಳೀಯ ಶಾಸಕ ಮೊಯಿದ್ದೀನ್‌ ಬಾವಾ ಅವರನ್ನು, ದೀಪಕ್ ಕುಟುಂಬದವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಬಲಿಗರೊಂದಿಗೆ ಮನೆಗೆ ಬಂದ ಬಾವಾ ಅವರು ನೀಡಿದ ಪರಿಹಾರ ಹಣವನ್ನು ಸ್ವೀಕರಿಸಲು ನಿರಾಕರಿಸಿದ ದೀಪಕ್‌ ರಾವ್‌ ಕುಟುಂಬಸ್ಥರು 'ನಿನ್ನೆ ಬರಬೇಕಿತ್ತು ಅಂತ್ಯಕ್ರಿಯೆಗೆ, ಇಂದು ಯಾಕೆ ಬಂದಿದ್ದೀರಿ' ಎಂದು ಪ್ರಶ್ನಿಸಿದರು.

'ನಿನ್ನೆ ಉದ್ವಿಗ್ನ ಸ್ಥಿತಿ ಇದ್ದುದರಿಂದ ಶಾಂತಿ ಭಂಗವಾಗಬಹುದು ಎಂಬ ಕಾರಣಕ್ಕೆ ಪೊಲೀಸರು ಅಂತ್ಯಕ್ರಿಯೆಗೆ ಬರಬೇಡಿ ಎಂದಿದ್ದರು, ಹಾಗಾಗಿ ಬರಲಿಲ್ಲ, ನಾನು ಮನೆಯಲ್ಲೇ ದುಃಖತಪ್ತನಾಗಿ ಕುಳಿತಿದ್ದೆ' ಎಂದು ಬಾವಾ ಪ್ರತಿಕ್ರಿಯೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕುಟುಂಬದವರು, 'ನಿಮ್ಮ ಪರಿಹಾರವೂ ಬೇಡ. ಸಹಾಯವೂ ಬೇಡ' ಎಂದು ಹೇಳಿ, ಬಾವ ಅವರನ್ನು ವಾಪಸ್ ಕಳುಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.