ಶನಿವಾರ, ಆಗಸ್ಟ್ 8, 2020
22 °C

ಆರ್‌ಎಸ್‌ಎಸ್‌ ಕಚೇರಿ ಮೇಲಿನ ದಾಳಿ ಪ್ರಕರಣ: ಆರೋಪಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಚೆನ್ನೈನ ಚೆಟ್‌ಪುಟ್‌ ನಗರದಲ್ಲಿರುವ ಆರ್‌ಎಸ್‌ಎಸ್‌ ಕೇಂದ್ರ ಕಚೇರಿ ಮೇಲೆ 1993ರಲ್ಲಿ ನಡೆದಿದ್ದ ಬಾಂಬ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಷ್ತಾಕ್‌ ಅಹಮದ್‌ (56) ಎಂಬಾತನನ್ನು ಸಿಬಿಐ ಶುಕ್ರವಾರ ಬಂಧಿಸಿದೆ.

ಮುಷ್ತಾಕ್‌ಗಾಗಿ ಕಳೆದ 24 ವರ್ಷಗಳಿಂದ ಹುಡುಕಾಟ ನಡೆದಿತ್ತು. ಶುಕ್ರವಾರ ಮುಂಜಾನೆ ಚೆನ್ನೈ ನಗರದ ಹೊರವಲಯದಲ್ಲಿ ಆತನನ್ನು ಬಂಧಿಸಲಾಯಿತು ಎಂದು ಸಿಬಿಐ ವಕ್ತಾರ ಅಭಿಷೇಕ್‌ ದಯಾಳ್‌ ತಿಳಿಸಿದ್ದಾರೆ.

1993ರ ಆಗಸ್ಟ್‌ 8ರಂದು ನಡೆದಿದ್ದ ದಾಳಿಯಲ್ಲಿ 11 ಜನ ಮೃತಪಟ್ಟಿದ್ದರು. ಆರ್‌ಡಿಎಕ್ಸ್‌ ಬಳಸಿ ಬಹುಮಹಡಿ ಕಟ್ಟಡವನ್ನು ಧ್ವಂಸ

ಗೊಳಿಸಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಮುಷ್ತಾಕ್‌ ಬಗ್ಗೆ ಮಾಹಿತಿ ನೀಡುವವರಿಗೆ ₹ 10 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.