ಬೆಳದಿಂಗಳ ಬೆನ್ನಲ್ಲೇ ಬಿರುಬಿಸಿಲು

7

ಬೆಳದಿಂಗಳ ಬೆನ್ನಲ್ಲೇ ಬಿರುಬಿಸಿಲು

Published:
Updated:
ಬೆಳದಿಂಗಳ ಬೆನ್ನಲ್ಲೇ ಬಿರುಬಿಸಿಲು

ಅನುಷ್ಕಾ ಮತ್ತೆ ಅಬ್ಬರಿಸಿದ್ದಾರೆ. ಕೆಂಪು ಸೀರೆ ಕೇಂಪೇರಿದ ಕಣ್ಣುಗಳನ್ನು ಇಷ್ಟಗಲ ಬಿಟ್ಟು ಭಯಹುಟ್ಟಿಸುತ್ತಾರೆ. ಆದರೆ ಇದೇ ‘ಭಾಗಮತಿ’ ಕೆಲವೇ ಕ್ಷಣಗಳ ಹಿಂದೆ ಪ್ರೇಮಸೂಸುವ ಬಟ್ಟಲು ಕಂಗಳ ‘ಚಂಚಲಾ’ ಆಗಿದ್ದಳು ಎಂಬ ಸಂಗತಿ ಕಥೆಯ ಟ್ವಿಸ್ಟ್‌ಗೆ ಕಾರಣವೇನಿರಬಹುದು ಎಂಬ ಪ್ರಶ್ನೆ ಹುಟ್ಟುಹಾಕುತ್ತದೆ.

ಜ.8ರಂದು ಯುಟ್ಯೂಬ್‌ಗೆ ಅಪ್‌ಲೋಡ್ ಆದ ‘ಭಾಗಮತಿ’ ಟ್ರೇಲರ್ ನೋಡಿದವರ ಮೊದಲಿಗರ ಬಹುತೇಕ ಕಾಮೆಂಟ್‌ಗಳು ಇದೇ ಧಾಟಿಯಲ್ಲಿವೆ. ಅನುಷ್ಕಾರ ಎರಡೂ ಶೇಡ್‌ಗಳನ್ನು ಟ್ರೇಲರ್‌ ಮನಮುಟ್ಟುವಂತೆ ದಾಖಲಿಸಿದೆ. ಬೆಳದಿಂಗಳ ‘ಚಂಚಲಾ’, ಬಿರುಬಿಸಿಲ ‘ಭಾಗಮತಿ’ ಪಾತ್ರಗಳು ಚಿತ್ರದ ಬಗ್ಗೆ ಕುತೂಹಲ ಹುಟ್ಟುಹಾಕುತ್ತವೆ.

ಟ್ರೇಲರ್ ನೋಡುವಾಗ ಅನುಷ್ಕಾ ಅಭಿನಯದ ಅರುಂಧತಿ, ಪಂಚಾಕ್ಷರಿ, ನಾಗವಲ್ಲಿ ಸಿನಿಮಾಗಳ ಪಾತ್ರಗಳು ಮನದ ಮೇಲೆ ಮೂಡುವುದು ಸಹಜ. ಆದರೆ ಅವೆಲ್ಲವನ್ನೂ ಮೀರಿದ ಮತ್ತೇನೋ ಒಂದು ಈ ಚಿತ್ರದಲ್ಲಿದೆ ಎನಿಸುವಂತೆ ಎರಡು ನಿಮಿಷದ ದೃಶ್ಯ ಸರಣಿಗಳು ಬಿಂಬಿಸುತ್ತವೆ. ಟ್ರೇಲರ್‌ನ ಮೊದಲರ್ಧ ಮೋಹಕ, ದ್ವಿತೀಯಾರ್ಧ ಭಯಾನಕ.

ನೈಸರ್ಗಿಕ ಬೆಳಕಿನಲ್ಲೇ ಶೂಟ್ ಆಗಿರುವ ಮೊದಲರ್ಧದ ಬಹುತೇಕ ದೃಶ್ಯಗಳು ನಿಸರ್ಗವನ್ನು ಸುಂದರವಾಗಿ ತೋರಿದರೆ, ದ್ವಿತೀಯಾರ್ಧದ ಕೃತಕ ಬೆಳಕಿನಲ್ಲಿ ಕಾಣಿಸುವ ಕಾಡೂ ಸಹ ಭಯ ಹುಟ್ಟಿಸುವಂತಿದೆ. ಚಿತ್ರದ ಸಂಗೀತದ ಬಗ್ಗೆ ಥಾಮನ್ ಭರವಸೆ ಹುಟ್ಟಿಸಿದ್ದಾರೆ. ಕೆಲ ದೃಶ್ಯಗಳಲ್ಲಿಯಂತೂ ಸಂಗೀತವೇ ಪ್ರಧಾನ, ಉಳಿದುದೆಲ್ಲವೂ ಗೌಣ ಎನಿಸಿಬಿಡುವುದೂ ಉಂಟು.

ಚಿತ್ರವು ಏಕಕಾಲಕ್ಕೆ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ತೆರೆಕಾಣಲಿದೆ.

‘ಪಿಳ್ಳಾ ಸಮಿಂದರ್’ ಎಂಬ ಸೂಪರ್ ಹಿಟ್ ಚಿತ್ರ ಕೊಟ್ಟ ಅಶೋಕ್ ಈ ಚಿತ್ರ ನಿರ್ದೇಶಿಸಿದ್ದಾರೆ. ‌ವಂಶಿ ಹಾಗೂ ಪ್ರಮೋದ್ ಈ ಚಿತ್ರದ ನಿರ್ಮಾಪಕರು. ಜ.26ರಂದು ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry