ಮಂಗಳವಾರ, ಸೆಪ್ಟೆಂಬರ್ 22, 2020
26 °C

ಕಮಲ್ ಹಾಸನ್‌ ಹೊಸ ಪಕ್ಷ ‘ಮಕ್ಕಳ್‌ ನೀದಿ ಮೈಯಂ’

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಮಲ್ ಹಾಸನ್‌ ಹೊಸ ಪಕ್ಷ ‘ಮಕ್ಕಳ್‌ ನೀದಿ ಮೈಯಂ’

ಮದುರೆ: ನಟ ಕಮಲ ಹಾಸನ್‌ ಅವರ ಹೊಸ ರಾಜಕೀಯ ಪಕ್ಷ ಉದ್ಘಾಟನೆಯಾಗಿದೆ. ಪಕ್ಷದ ಹೆಸರು ಮಕ್ಕಳ್‌ ನೀದಿ ಮೈಯಂ.

ಮದುರೆಯಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕಮಲ್‌ ಹಾಸನ್‌ ತಮ್ಮ ನೂತನ ಪಕ್ಷದ ಹೆಸರು ಮತ್ತು ಚಿಹ್ನೆ ಅನಾವರಣಗೊಳಿಸಿದರು. ಮಕ್ಕಳ್‌ ನೀದಿ ಮೈಯಂ ಜನಕ್ಕಾಗಿ ನ್ಯಾಯ ಕೇಂದ್ರ ಎನ್ನುವ ಅರ್ಥ ನೀಡುತ್ತದೆ

‘ನಿಮ್ಮ ಮುಂದೆ ಭಾಷಣ ಮಾಡುವುದಕ್ಕಿಂತಲೂ ನಿಮ್ಮಿಂದ ಸಲಹೆ ಪಡೆಯುತ್ತೇನೆ’ ಎಂದು ಕಮಲ್‌ ಹೇಳಿದರು.

ಪಕ್ಷದ ಉದ್ಘಾಟನೆ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ತಮಿಳುನಾಡು ಎಎಪಿ ಉಸ್ತುವಾರಿ ಸೋಮನಾಥ್‌ ಭಾರ್ತಿ ಭಾಗಿಯಾದರು.

ಪಕ್ಷದ ಚಿಹ್ನೆಯಲ್ಲಿ ಬಣ್ಣದ ಆರು ಕೈಗಳು ಜೋಡಿಸಿರುವ ಚಿತ್ರ(ಮೂರು ಕೆಂಪು, ಮೂರು ಬಿಳುಪು ಬಣ್ಣ) ಹಾಗೂ ಅದರ ಮಧ್ಯದಲ್ಲಿ ನಕ್ಷತ್ರವಿದೆ.

ಪಕ್ಷಕ್ಕೆ ಸೇರ್ಪಡೆಯಾಗಲು ವೆಬ್‌ಸೈಟ್‌ ಮೂಲಕವೂ ಅವಕಾಶ ಕಲ್ಪಿಸಲಾಗಿದೆ. ವೆಬ್‌ಸೈಟ್‌: http://www.maiam.com

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.