ಶುಕ್ರವಾರ, ಏಪ್ರಿಲ್ 23, 2021
32 °C

ಫೇಸ್ ಬುಕ್ ಖಾತೆ ಹ್ಯಾಕ್ ಆಗದಂತೆ ಮುಂಜಾಗ್ರತೆ ವಹಿಸುವುದು ಹೇಗೆ ?

ರಶ್ಮಿ ಕಾಸರಗೋಡು Updated:

ಅಕ್ಷರ ಗಾತ್ರ : | |

ಫೇಸ್ ಬುಕ್ ಖಾತೆ ಹ್ಯಾಕ್ ಆಗದಂತೆ ಮುಂಜಾಗ್ರತೆ ವಹಿಸುವುದು ಹೇಗೆ ?

ಫೇಸ್‌ಬುಕ್‌ನಲ್ಲಿ ಲಿಂಕ್ ಕ್ಲಿಕ್ ಮಾಡುವಾಗ ಹುಷಾರಾಗಿರಬೇಕು. ಯಾವ ಲಿಂಕ್‌ನಲ್ಲಿ ಏನೇನು ಅಡಗಿದೆಯೋ ಎಂಬುದು ಗೊತ್ತಾಗಲ್ಲ. ಕೆಲವೊಂದು ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನಮ್ಮ ಖಾತೆ ಹ್ಯಾಕ್ ಆಗುವ ಸಾಧ್ಯತೆಯೂ ಇದೆ. ಫೇಸ್‌ಬುಕ್ ಖಾತೆಯ ಸುರಕ್ಷತೆ ಕಾಪಾಡಲು ಫೇಸ್‌ಬುಕ್‌ನಲ್ಲಿಯೇ ಕೆಲವು ಫೀಚರ್‌ಗಳಿವೆ.

ಪಾಸ್‌ವರ್ಡ್ ಸ್ಟ್ರಾಂಗ್ ಆಗಿದ್ದರೆ ಖಾತೆಯೂ ಸುರಕ್ಷಿತವಾಗಿರುತ್ತದೆ. ಒಂದು ವೇಳೆ ಯಾರಾದರೂ ನಮ್ಮ ಫೇಸ್ ಬುಕ್ ಖಾತೆಗೆ ಲಾಗಿನ್ ಆಗಲು ಯತ್ನಿಸಿದರೆ, ಅದನ್ನು ತಿಳಿಯಲು ಫೇಸ್‌ಬುಕ್‌ನಲ್ಲಿಯೇ ವ್ಯವಸ್ಥೆ ಇದೆ.

ಫೇಸ್‌ಬುಕ್ ಖಾತೆಯನ್ನು ಮತ್ತಷ್ಟು ಸುರಕ್ಷಿತವಾಗಿರಿಸುವುದು ಹೇಗೆ?: ಖಾತೆಗೆ ಲಾಗಿನ್ ಆಗಿ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ ಸೆಟ್ಟಿಂಗ್ಸ್‌ನಲ್ಲಿ Security &login ಆಯ್ಕೆ ಮಾಡಿ ಅಲ್ಲಿ ನಿಮಗೆ ನೀವು ಫೇಸ್‌ಬುಕ್‌ಗೆ ಲಾಗಿನ್ ಆದ ಸಿಸ್ಟಂ (ಮೊಬೈಲ್ ಅಥವಾ ಡೆಸ್ಕ್ ಟಾಪ್) ಯಾವುದು?, ಲಾಗಿನ್ ಆದ ದಿನಾಂಕ ಮತ್ತು ಸಮಯ ಕೂಡ ಕಾಣುತ್ತದೆ .ಇಲ್ಲಿ ನಿಮಗೆ ತಿಳಿಯದೆ ಬೇರೆ ಯಾವುದಾದರೂ ಸಿಸ್ಟಂನಿಂದ ಲಾಗಿನ್ ಆಗಿದ್ದರೆ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲು ಯಾರೋ ಪ್ರಯತ್ನಿಸಿದ್ದಾರೆ ಎಂದರ್ಥ. ಅಲ್ಲಿ ಕಾಣುವ ಮೆನುವಿನಲ್ಲಿ Not You? ಎಂಬ ಆಯ್ಕೆ ಕಾಣಬಹುದು. ಇದಾದ ನಂತರ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಫೇಸ್‌ಬುಕ್ ಕೆಲವು ಸಲಹೆಗಳನ್ನು ಸೂಚಿಸುತ್ತದೆ, ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಖಾತೆ ಸುರಕ್ಷಿತವಾಗುತ್ತದೆ.

ನಿಮ್ಮ ಖಾತೆ ಲಾಗಿನ್ ಆದ ಸಿಸ್ಟಂಗಳ ಮಾಹಿತಿಯ ಕೆಳಗೆ logout off all sessions ಎಂದು ಕಾಣಬಹುದು. ಅದು ಕ್ಲಿಕ್ ಮಾಡಿದರೆ ಅಲ್ಲಿಯವರೆಗೆ ಲಾಗಿನ್ ಆಗಿದ್ದ ಎಲ್ಲ ಸಿಸ್ಟಂಗಳಿಂದ ನಿಮ್ಮ ಖಾತೆ ಸೈನ್ ಔಟ್ ಆಗುತ್ತದೆ. ಇದಲ್ಲದೆ ನಿಮ್ಮ ಖಾತೆಯನ್ನು ಮತ್ತಷ್ಟು ಸುರಕ್ಷಿತವಾಗಿರಿಸಲು Two factor Authentication ಎಂಬ ಆಯ್ಕೆ ಆಯ್ಕೆ ಮಾಡಿ.

ಜೀಮೇಲ್‌ನಲ್ಲಿಯೂ ಇಂಥ ಆಯ್ಕೆ ಇದೆ, ಇದು ಎನೇಬಲ್ ಮಾಡಿದರೆ ನೀವು ಲಾಗಿನ್ ಆಗುವಾಗ ನಿಮ್ಮ ಮೊಬೈಲ್‌ಗೆ ಸಂದೇಶವೊಂದನ್ನು ಕಳುಹಿಸಲಾಗುತ್ತದೆ. ಅದರಲ್ಲಿರುವ OTP ನಮೂದಿಸಿದ ನಂತರವೇ ನಿಮಗೆ ಲಾಗಿನ್ ಆಗಬಹುದು.

ಒಂದು ವೇಳೆ ನಿಮ್ಮ ಖಾತೆ ಹ್ಯಾಕ್ ಆಗಿ, ನಿಮಗೆ ಲಾಗಿನ್ ಆಗಲು ಸಾಧ್ಯವಿಲ್ಲದ ಪರಿಸ್ಥಿತಿ ಬಂದೊದಗಿದರೆ ನಿಮ್ಮ trusted Contacts ಬಳಸಿ ಖಾತೆಯನ್ನು ಅನ್‌ಲಾಕ್ ಮಾಡಬಹುದು.

ಲಾಗಿನ್ ಆದಾಗಲೆಲ್ಲಾ ನಿಮಗೆ ಗೊತ್ತಾಗಬೇಕು ಎಂದಾದರೆ ಲಾಗಿನ್ ಅಲರ್ಟ್ ಸೆಟ್ ಮಾಡಿದರೆ ಸಾಕು. ಲಾಗಿನ್ ಅಲರ್ಟ್ ಸೆಟ್ ಮಾಡಿದರೆ ಖಾತೆಗೆ ಲಾಗಿನ್ ಆದಾಗಲೆಲ್ಲಾ ನಿಮಗೆ ಇಮೇಲ್ ಅಥವಾ ಮೊಬೈಲ್ ಸಂದೇಶ ಲಭಿಸುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು