ಮಂಗಳವಾರ, ಆಗಸ್ಟ್ 4, 2020
26 °C

ಗೂಗಲ್‌ ಡೂಡಲ್‌ನಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಗೂಗಲ್‌ ಡೂಡಲ್‌ನಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ

ಬೆಂಗಳೂರು: ದೇಶದ ಸ್ವಾತಂತ್ರ್ಯ ಹೋರಾಟ ಹಾಗೂ ಸ್ವಾತಂತ್ರ್ಯಾನಂತರ ಜನಸಾಮಾನ್ಯರಿಗಾಗಿ ದುಡಿದವರಲ್ಲಿ ಪ್ರಮುಖರಾದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ 115ನೇ ಜನ್ಮದಿನ ಸಂದರ್ಭದಲ್ಲಿ ಗೂಗಲ್ ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ.

ದೇಶದ ಕಲೆ, ಸಂಗೀತ ವಿಸ್ತರಿಸಲು ಹಾಗೂ ಮಹಿಳೆಯ ಉನ್ನತಿಗಾಗಿ ಕಮಲಾದೇವಿ ಅವರು ನೀಡಿದ ಕೊಡುಗೆಯನ್ನು ವರ್ಣಚಿತ್ರಗಳ ಮೂಲಕ ಸ್ಮರಿಸಲಾಗಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ, ಹೋರಾಟದಿಂದ ಬಂಧನಕ್ಕೊಳಗಾದ ದೇಶದ ಮೊದಲ ಮಹಿಳಾ ಸತ್ಯಾಗ್ರಹಿ ಕಮಲಾದೇವಿ ಚಟ್ಟೋಪಾಧ್ಯಾಯ ಕರ್ನಾಟಕದ ಕರಾವಳಿಯವರು.

1903, ಏಪ್ರಿಲ್‌ 3ರಂದು ಮಂಗಳೂರಿನಲ್ಲಿ ಜನಿಸಿದ ಕಮಲಾದೇವಿ ಅವರಿಗೆ 14ನೇ ವಯಸ್ಸಿಗೆ ಮದುವೆ ನಡೆಯಿತು. ಎರಡೇ ವರ್ಷಗಳಲ್ಲಿ ವಿಧವೆಯಾದ ಅವರು ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದರು. ಭಾರತಕ್ಕೆ ಮರಳಿದ ನಂತರ 1927ರಲ್ಲಿ ಇಂಡಿಯನ್‌ ನ್ಯಾಷನಲ್ ಕಾಂಗ್ರೆಸ್‌ ಸೇರ್ಪಡೆಯಾದರು.

ಮಹಾತ್ಮ ಗಾಂಧಿ, ನೆಹರೂ, ಸರೋಜಿನಿ ನಾಯ್ಡು, ಇಂದಿರಾ ಗಾಂಧಿ ಅವರೊಂದಿಗೆ ನಿಕಟ ಸಂಪರ್ಕವಿದ್ದ ಕಮಲಾದೇವಿ ನಿರಾಶ್ರಿತರಿಗಾಗಿ ನೆರವಿನ ಹಸ್ತ ನೀಡುವಲ್ಲಿ, ಕೈಕರಕುಶಲ ಕಲೆಯನ್ನು ಉಳಿಸುವಲ್ಲಿ, ಮಹಿಳೆಯರಿಗಾಗಿ ಅಪಾರವಾದ ಕೆಲಸವನ್ನು ಮಾಡಿದ್ದಾರೆ.

ರಾಷ್ಟ್ರೀಯ ನಾಟಕ ಶಾಲೆ, ಸಂಗೀತ ನಾಟಕ ಅಕಾಡೆಮಿ ಸೇರಿ ಅನೇಕ ಸಂಸ್ಥೆಗಳ ಸ್ಥಾಪನೆಯಲ್ಲಿ ಕಮಲಾದೇವಿ ಶ್ರಮಿಸಿದ್ದಾರೆ.

ಸಮುದಾಯ ಅಭಿವೃದ್ಧಿ ಸೇವಾ ಕಾರ್ಯಗಳಿಗಾಗಿ ಭಾರತೀಯ ಸಹಕಾರ ಸಂಘದ ಸ್ಥಾಪಕಿ ಮತ್ತು ಅಧ್ಯಕ್ಷೆ ಕಮಲಾದೇವಿ  ಚಟ್ಟೋಪಾಧ್ಯಾಯ ಅವರಿಗೆ 1966ರಲ್ಲಿ ರೇಮನ್‌ ಮ್ಯಾಗ್ಸೇಸೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್‌(1974), ಪದ್ಮಭೂಷಣ(1955), ಪದ್ಮವಿಭೂಷಣ(1987) ಸೇರಿ ಅನೇಕ ಪ್ರಶಸ್ತಿಗಳು ಸಂದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.