ಬೆಂಗಳೂರು: ‘ನನಗಿಂತ 13 ವರ್ಷ ಸಿದ್ದರಾಮಯ್ಯ ಬಚ್ಚ. ನಾನು ಸ್ಪೀಕರ್ ಆಗಿದ್ದಾಗ ಸಾಕಷ್ಟು ಸಲ ಕಾಂಗ್ರೆಸ್ ಪರ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯನಿಂದ ಕಾಂಗ್ರೆಸ್‌ಗೆ ಅನುಕೂಲ ಆಗೊಲ್ಲ. ಅವನತಿ ಹೊಂದುತ್ತೆ ಅದು ಪಕ್ಕ’ ಎಂದು ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಆಪಾದಿಸಿದರು.

‘ನಾನು ಸೋತಿರುವ ಹಿನ್ನೆಲೆಯಲ್ಲಿ ಪಕ್ಷ ಬಿಡುವ ಮಾತೇ ಇಲ್ಲ. 1996ರಿಂದ ಕಾಂಗ್ರೆಸ್‌ನಲ್ಲಿ ನಾನಿದ್ದೇನೆ. ಪಕ್ಷ ತೊರೆಯುವ ಮಾತಿಲ್ಲ’ ಎಂದು ಕೋಳಿವಾಡ ಸ್ಪಷ್ಟಪಡಿಸಿದರು.

‘ಪಕ್ಷಗಳು ಒಂದಾಗಿ ಸರ್ಕಾರ ರಚನೆ ಮಾಡ್ಬೇಕು. ಆದ್ರೆ ಈ ಮನುಷ್ಯ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಬಿಡೊಲ್ಲ. ಹೀನಾಯವಾಗಿ ಚಾಮುಂಡೇಶ್ವರಿ ಸೋತು ಬಂದಿದ್ದಾನೆ. ಬಾದಾಮಿಯಲ್ಲಿ ಕೇವಲ ಅಂತರಗಳಲ್ಲಿ ಗೆದ್ದು ಬಂದಿದ್ದಾನೆ. ನಾಚಿಕೆ ಆಗ್ಬೇಕು ಸಿದ್ದರಾಮಯ್ಯಗೆ. ಜನ ಏನ್ ತೀರ್ಮಾನ ಮಾಡಿದ್ರು ಅಂತ ನೀವೆ ನೋಡಿದ್ರಲ್ಲ’ ಎಂದು ವಾಗ್ದಾಳಿ ಮಾಡಿದರು.

‘ಸಿದ್ದರಾಮಯ್ಯ ಯಾವುದೇ ಪೋಸ್ಟ್ ಕೊಡಬೇಡಿ ಅಂತ ರಾಹುಲ್‌ಗೆ ನಾನೇ ಕುದ್ದಾಗಿ ಹೇಳ್ತೀನಿ. ರಾಹುಲ್ ಅವರ ಅಮ್ಮ ಸೋನಿಯಾ ಗಾಂಧಿ ಅವರ ಮಾತುಗಳನ್ನು ಕೇಳ್ತಾರೆ. ಸಿದ್ದರಾಮಯ್ಯ ಮುಂದೆ ಅಧಿಕಾರಕ್ಕೆ ಬರೋದೆ ಇಲ್ಲ’ ಎಂದು ಕೋಳಿವಾಡ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.