ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಕಟ್ಟಡವೊಂದರ ಮುಂದೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ನಡುವೆ ನಿಂತಿರುವಾಗ, ಕೋತಿಯೊಂದು ಅವರ ಮೇಲೆ ಧುಮುಕುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರಿ ಭದ್ರತೆಯ ನಡುವೆಯೂ ಅಮಿತ್ ಶಾ ಅವರಿಗೆ ಕೋತಿ ಏನು ಮಾಡಿತು ನೋಡಿ ಎಂದು ಕೆಲವರು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಅದು ಸುಳ್ಳು ಸುದ್ದಿ.

ಇನ್ವಿಡ್ ಟೂಲ್ ಮೂಲಕ ವಿಡಿಯೊದ ಕೀಫ್ರೇಮ್ಗಳನ್ನು ಪ್ರತ್ಯೇಕಿಸಿ, ಒಂದು ಕೀಫ್ರೇಮ್ ಅನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲನೆ ನಡೆಸಿದಾಗ, ಇದೇ ವಿಡಿಯೊ ಅನ್ನು ಹಲವರು ಇಂಥದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿರುವುದು ಕಂಡಿತು. ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ಗೆ ಒಳಪಡಿಸಿದಾಗ, ‘ದಿ ಫೈನಾನ್ಶಿಯಲ್ ಎಕ್ಸ್ಪ್ರೆಸ್’ನಲ್ಲಿ 2019ರ ಜೂನ್ 1ರಂದು ಪ್ರಕಟವಾಗಿದ್ದ ವರದಿಗೆ ಸಂಪರ್ಕ ಕಲ್ಪಿಸಿತು. ಅಮಿತ್ ಶಾ ಗೃಹಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರದ ವಿಡಿಯೊ ಅದು. ಆ ವರದಿಯಲ್ಲಿ ಇದೇ ವಿಡಿಯೊ ಇದ್ದರೂ, ಅದರಲ್ಲಿ ಕೋತಿ ಇಲ್ಲ. ವರದಿಯಲ್ಲಿ ಕೋತಿಯ ಪ್ರಸ್ತಾಪವೂ ಇಲ್ಲ. ವಿಡಿಯೊ ಅನ್ನು ಕೆಲವು ಎಐ ಪತ್ತೆ ಸಾಧನಗಳಿಂದ ವಿಶ್ಲೇಷಣೆಗೊಳಪಡಿಸಿದಾಗ, ಅದು ಎಐ ವಿಡಿಯೊ ಎನ್ನುವುದು ಖಚಿತವಾಯಿತು ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.