ಬಾಲಕಿಯೊಬ್ಬರು ವಯೊಲಿನ್ ವಾದನ ಕಾರ್ಯಕ್ರಮ ನೀಡುತ್ತಿದ್ದು, ಕಾರ್ಯಕ್ರಮದ ನಡುವೆ ಅವರು ದಿಢೀರ್ ವಯೊಲಿನ್ ವಾದನ ನಿಲ್ಲಿಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಕೇರಳದಲ್ಲಿ ನಡೆದ ಘಟನೆಯಾಗಿದ್ದು, ಮುಸ್ಲಿಂ ಸಮುದಾಯದ ಕೆಲವರು ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಮಧ್ಯಪ್ರವೇಶ ಮಾಡಿ ಅಡ್ಡಿಪಡಿಸಿದರು ಎಂದು ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದರ ಮೇಲೆ ‘ಮನೋರಮಾ ನ್ಯೂಸ್’ ಲೋಗೊ ಇರುವುದು ಕಂಡಿತು. ನಿರ್ದಿಷ್ಟ ಪದದ ಮೂಲಕ ಗೂಗಲ್ನಲ್ಲಿ ಹುಡುಕಾಡಿದಾಗ 2025ರ ಮಾರ್ಚ್ನ ವಿಡಿಯೊಕ್ಕೆ ಅದು ಸಂಪರ್ಕ ನೀಡಿತು. 12 ವರ್ಷದ ಗಂಗಾ ಶಶಿಧರನ್ ಎನ್ನುವ ಬಾಲಕಿ ನಿಗದಿತ ಅವಧಿ ಮೀರಿ ಕಾರ್ಯಕ್ರಮ ಮುಂದುವರಿಸುತ್ತಿದ್ದಾಗ, ಅಲ್ಲಿಗೆ ಆಗಮಿಸಿದ ಪೊಲೀಸರು ಕಾರ್ಯಕ್ರಮವನ್ನು ತಡೆದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಗಂಗಾ ಶಶಿಧರನ್ ಅವರ ತಂದೆಯೂ ಕಾರ್ಯಕ್ರಮ ನಿಲ್ಲಲು ಹಿಂದೂ–ಮುಸ್ಲಿಂ ವಿಚಾರ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಳೆಯ ವಿಡಿಯೊಕ್ಕೆ ಕೋಮು ಆಯಾಮ ನೀಡಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಬೂಮ್ ಫ್ಯಾಕ್ಟ್ ಚೆಕ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.