ಬೃಹತ್ ಅತ್ಯಾಧುನಿಕ ಯಂತ್ರವೊಂದು ರೈಲು ಹಳಿಗಳನ್ನು ಅತ್ಯಂತ ಕ್ಷಿಪ್ರವಾಗಿ ಅಳವಡಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರೊಂದಿಗೆ, ‘ನೋಡಿ ಇದು ಈಗಿನ ಭಾರತದ ತಾಂತ್ರಿಕತೆ. ತಾಂತ್ರಿಕವಾಗಿ ಭಾರತ ಎಷ್ಟು ಮುಂದುವರಿದಿದೆ ಎಂಬುದಕ್ಕೆ ಇದೇ ಸಾಕ್ಷ್ಯ. 60 ವರ್ಷಗಳಲ್ಲಿ ಇಂತಹ ಕೆಲಸವಾಗಿರಲಿಲ್ಲ. ಅಷ್ಟೂ ವರ್ಷ ದೇಶದ ಜನರ ತೆರಿಗೆ ಹಣವನ್ನು ಸ್ವಿಸ್ ಬ್ಯಾಂಕ್‌ನಲ್ಲಿ ಇಡಲಾಗುತ್ತಿತ್ತು ಅಷ್ಟೆ’ ಎಂಬ ಸಂದೇಶಗಳನ್ನೂ ಹಂಚಿಕೊಳ್ಳಲಾಗುತ್ತಿದೆ. ಕೆಲವರು, ಈಗಿನ ಸರ್ಕಾರದ ಇಚ್ಛಾಶಕ್ತಿಯ ಕಾರಣದಿಂದ ಮಾತ್ರ ಇದು ಸಾಧ್ಯವಾಗುತ್ತಿದೆ ಎಂದು ಈ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಇದು ಸುಳ್ಳು ಸುದ್ದಿ.

ವಿಡಿಯೊದಲ್ಲಿ ಇರುವುದು ಭಾರತೀಯ ರೈಲ್ವೆಯ ಕಾಮಗಾರಿ ದೃಶ್ಯವಲ್ಲ. ಬದಲಿಗೆ ಅದು, ಮಲೇಷ್ಯಾದಲ್ಲಿ ಅತ್ಯಾಧುನಿಕ ಯಂತ್ರದ ಮೂಲಕ ರೈಲು ಹಳಿ ಅಳವಡಿಕೆ ಕಾಮಗಾರಿ ನಡೆಸುತ್ತಿರುವ ದೃಶ್ಯ. ಇತ್ತೀಚಿನ ತಿಂಗಳುಗಳಲ್ಲಷ್ಟೇ ಮಲೇಷ್ಯಾ ಆ ವಿಡಿಯೊವನ್ನು ಬಿಡುಗಡೆ ಮಾಡಿತ್ತು. ಆ ಕಾಮಗಾರಿ ನಡೆಸುತ್ತಿರುವುದು ಚೀನಾದ ಕಂಪನಿ, ಯಂತ್ರವೂ ಚೀನಾದ್ದೇ ಆಗಿದೆ. ಆ ವಿಡಿಯೊವನ್ನೇ ಭಾರತದ್ದು ಎಂದು ಹೇಳಿಕೊಂಡು ದಾರಿತಪ್ಪಿಸುವಂತಹ ಸಂದೇಶವನ್ನು ಸೃಷ್ಟಿಸಲಾಗಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.