ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಕೋವಿಡ್‌ ಲಸಿಕೆ ಪಡೆದುಕೊಂಡರೆ ಪೋಲಿಯೋ ತಗಲುವುದನ್ನು ತಡೆಯಬಹುದೇ?

Last Updated 14 ಮೇ 2021, 19:31 IST
ಅಕ್ಷರ ಗಾತ್ರ

‘ಕೋವಿಡ್‌ ಲಸಿಕೆ ಪಡೆದುಕೊಂಡರೆ ಪೋಲಿಯೋ ಸೇರಿದಂತೆ 20 ಬಗೆಯ ಕಾಯಿಲೆಗಳು ತಗಲುವುದನ್ನು ತಡೆಯಬಹುದಾಗಿದೆ ಎಂದು ಸಾಬೀತಾಗಿದೆ’ ಎಂದು ಪೋಸ್ಟ್‌ಕಾರ್ಡ್‌ ಕನ್ನಡ ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟರ್ ಪ್ರಕಟಿಸಿದೆ. ಈ ಪೋಸ್ಟರ್‌ ಅನ್ನು ಇತರರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ, ಟ್ವೀಟ್‌ಗಳಲ್ಲಿ ಹಂಚಿಕೊಂಡಿದ್ದಾರೆ. ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿಯೂ ಈ ಪೋಸ್ಟರ್‌ ವೈರಲ್ ಆಗಿದೆ.

ಕೋವಿಡ್‌ಗೆಂದು ಅಭಿವೃದ್ಧಿಪಡಿಸಿರುವ ಲಸಿಕೆಯು ಪೋಲಿಯೊವನ್ನು ತಡೆಯುತ್ತದೆ ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ. ಪೋಲಿಯೊ ತಡೆಗೆ ಮಕ್ಕಳು ಐದು ವರ್ಷಕ್ಕಿಂತ ಚಿಕ್ಕವರಿದ್ದಾಗಲೇ ಪೋಲಿಯೊ ಹನಿ ಹಾಕಲಾಗುತ್ತದೆ. ಐದು ವರ್ಷಕ್ಕಿಂತ ದೊಡ್ಡವರಿಗೆ ಪೋಲಿಯೊ ಹನಿ ಹಾಕುವುದಿಲ್ಲ. ಜಗತ್ತಿನ ಯಾವ ದೇಶದಲ್ಲೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೋವಿಡ್‌ ಲಸಿಕೆ ನೀಡುತ್ತಿಲ್ಲ. ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಬಿಟ್ಟು ಎಲ್ಲಾ ರಾಷ್ಟ್ರಗಳಲ್ಲಿ ಪೋಲಿಯೊ ನಿರ್ಮೂಲನೆಯಾಗಿದೆ. 20 ಬಗೆಯ ಕಾಯಿಲೆಗಳನ್ನು ಕೋವಿಡ್‌ ಲಸಿಕೆ ತಡೆಗಟ್ಟುತ್ತದೆ ಎಂಬುದಕ್ಕೂ ಆಧಾರ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT