ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಜೈವಿಕ ಉದ್ಯಾನ | ಬಹು ಅಂಗಾಂಗ ವೈಫಲ್ಯದಿಂದ ಸಿಂಹ ಸಾವು

Last Updated 21 ಜುಲೈ 2019, 3:51 IST
ಅಕ್ಷರ ಗಾತ್ರ

ಹೈದರಾಬಾದ್:ಇಲ್ಲಿನ ನೆಹರೂ ಜೈವಿಕ ಉದ್ಯಾನದಲ್ಲಿ ಸಿಂಹವೊಂದುಬಹು ಅಂಗಾಂಗ ವೈಫಲ್ಯದಿಂದ ಶನಿವಾರ ಮೃತಪಟ್ಟಿದೆ.

‘ಜೀತು’ ಹೆಸರಿನಿಂದ ಕರೆಯಲ್ಪಡುತ್ತಿದ್ದ ಐದು ವರ್ಷ ವಯಸ್ಸಿನ ಈ ಸಿಂಹವು ಬೆನ್ನುಹುರಿಯ ಗಾಯಕ್ಕೊಳಗಾಗಿ, ಆ ಭಾಗದ ನರಗಳ ಸಂವೇದನಾಶೀಲತೆಯನ್ನು ಕಳೆದುಕೊಂಡಿತ್ತು. ಜತೆಗೆ, ಬಹು ಅಂಗಾಂಗ ವೈಫಲ್ಯದಿಂದಾಗಿ ಸಾವಿಗೀಡಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ಸಂಬಂಧ ಸಿಂಹಕ್ಕೆ 12 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾಗಿ ಎಎನ್‌ಐ ಟ್ವೀಟ್‌ ಮಾಡಿದೆ.

ಈ ಸಿಂಹವು ಏಷ್ಯಾ ಪ್ರಭೇದದ್ದಾಗಿದೆ. ಈ ಪ್ರಭೇದದ ಸಿಂಹಗಳು ಅಳಿವಿನಂಚಿನಲ್ಲಿದ್ದು, ಇವುಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಗುಜರಾತ್‌ನ ಗೀರ್‌ ರಾಷ್ಟ್ರೀಯ ಅರಣ್ಯ ವಲಯದಲ್ಲಿ ಈ ಸಿಂಹಗಳು ಇವೆ.

ಏಷ್ಯಾ ಸಿಂಹದ ವೈಜ್ಞಾನಿಕ ಹೆಸರು ಪ್ಯಾಂಥೆರಾ ಲಿಯೋ ಪರ್ಸಿಕಾ. ಈ ಪ್ರಭೇದ ಅಳಿವಿನಂಚಿನಲ್ಲಿರುವ ವನ್ಯಪ್ರಾಣಿಗಳ ಪಟ್ಟಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT