ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಂಗ್‌ಸ್ಟರ್ ಅತೀಕ್‌ನಿಂದ ವಶಪಡಿಸಿಕೊಂಡ ಜಾಗದಲ್ಲಿ ಬಡವರಿಗಾಗಿ 76 ಮನೆಗಳ ನಿರ್ಮಾಣ

Published 8 ಜೂನ್ 2023, 10:05 IST
Last Updated 8 ಜೂನ್ 2023, 10:05 IST
ಅಕ್ಷರ ಗಾತ್ರ

ಪ್ರಯಾಗ್‌ರಾಜ್: ಬಡವರಿಗಾಗಾಗಿ ಕೈಗೆಟಕುವ ಬೆಲೆಗೆ ಲಭ್ಯವಾಗುವಂತೆ ನಿರ್ಮಿಸಲಾಗುತ್ತಿರುವ 76 ಮನೆಗಳಿರುವ ವಸತಿ ಸಮುಚ್ಚಯವನ್ನು ಉತ್ತರ ಪ್ರದೇಶ ಸರ್ಕಾರ ನಿರ್ಮಿಸಿದೆ. ಅಷ್ಟಕ್ಕೂ ಈ ಮನೆ ನಿರ್ಮಾಣಗೊಂಡಿರುವುದು ಇತ್ತೀಚೆಗೆ ಹತನಾದ ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್‌ನಿಂದ ವಶಪಡಿಸಿಕೊಳ್ಳಲಾದ ಜಾಗದಲ್ಲಿ. 

ಈ ಕುರಿತು ವಿಡಿಯೊ ಒಂದನ್ನು ಪಿಟಿಐ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಈ ಮನೆಗಳ ನಿರ್ಮಾಣಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2021ರ ಡಿ. 26ರಂದು ಭೂಮಿಪೂಜೆ ನೆರವೇರಿಸಿದ್ದರು. ಒಟ್ಟು 1731 ಚದರ ಮೀಟರ್‌ನ ಈ ಜಾಗ ನಗರದ ಲುಕರ್‌ಗಂಜ್ ಪ್ರದೇಶದಲ್ಲಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಈ ಮನೆಗಳ ನಿರ್ಮಾಣ ನಡೆಯುತ್ತಿದ್ದು, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರ ಎರಡು ಹಂತಗಳಲ್ಲಿ ನಿರ್ಮಾಣ ಮಾಡುತ್ತಿದೆ.

ಅತೀಕ್ ಅಹ್ಮದ್‌ 2005ರಲ್ಲಿ ಬಹುಜನ ಸಮಾಜ ಪಾರ್ಟಿಯ ಶಾಸಕ ರಾಜು ಪಾಲ್‌ ಎಂಬುವವರನ್ನು ಹತ್ಯೆ ಮಾಡಿದ್ದ. ಇದೇ ಪ್ರಕರಣ ಸಾಕ್ಷಿ ಉಮೇಶ್ ಪಾಲ್‌ ಎಂಬಾತನನ್ನೂ ಹತ್ಯೆಗೈದಿದ್ದ.

ಈ ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದ ಅತೀಕ್ ಹಾಗೂ ಆತನ ಸೋದರ ಅಶ್ರಫ್‌ ಇಬ್ಬರನ್ನು ಪತ್ರಕರ್ತರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕಳೆದ ಏ. 15ರಂದು ಗುಂಡಿಟ್ಟು ಹತ್ಯೆ ಮಾಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT