ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ: ಗಂಗಾ ನದಿಯಲ್ಲಿ ಕುಸಿದು ಬಿದ್ದ ನಿರ್ಮಾಣ ಹಂತದ ಸೇತುವೆ– ಇದು ಎರಡನೇ ಬಾರಿ!

ನಿರ್ಮಾಣ ಹಂತದಲ್ಲಿದ್ದ ನದಿ ಸೇತುವೆಯೊಂದು ಕುಸಿದು ಬಿದ್ದಿರುವ ಘಟನೆ ಭಾನುವಾರ ಬಿಹಾರದ ಬಾಗಲ್ಪುರ್‌ನಲ್ಲಿ ನಡೆದಿದೆ.
Published 4 ಜೂನ್ 2023, 14:24 IST
Last Updated 4 ಜೂನ್ 2023, 14:24 IST
ಅಕ್ಷರ ಗಾತ್ರ

ಪಟ್ನಾ: ನಿರ್ಮಾಣ ಹಂತದಲ್ಲಿದ್ದ ನದಿ ಸೇತುವೆಯೊಂದು ಕುಸಿದು ಬಿದ್ದಿರುವ ಘಟನೆ ಭಾನುವಾರ ಬಿಹಾರದ ಬಾಗಲ್ಪುರ್‌ನಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿವೆ.

ಬಾಗಲ್ಪುರ್ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಅಂಗುನಿಘಾಟ್–ಸುಲ್ತಾನ್‌ಗಂಜ್ ಜೋಡಿ ಸೇತುವೆ ಕುಸಿದು ಬಿದ್ದಿದೆ. ಈ ಸೇತುವೆ ಬಾಗಲ್ಪುರ್ – ಖಾಗಾರಿಯಾ ಜಿಲ್ಲೆಗಳನ್ನು ಕೂಡಿಸುತ್ತದೆ.

ಈ ಸೇತುವೆ ಎರಡನೇ ಬಾರಿ ಕುಸಿದಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಭಾರಿ ಗಾಳಿ ಮಳೆಗೆ ಭಾಗಶಃ ಕುಸಿದಿತ್ತು. ಮರು ನಿರ್ಮಾಣ ಮಾಡಲಾಗುತ್ತಿತ್ತು.

ಈ ಸೇತುವೆಯನ್ನು ಸುಮಾರು ₹1,700 ಕೋಟಿಯಲ್ಲಿ ಬಿಹಾರ ಸರ್ಕಾರ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ. ಈ ಕುರಿತು ಇಂಡಿಯಾ ಟುಡೇ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT