‘ಭಗವಾನ್ ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲೆರಿಸಿ ಭರತ ಆಡಳಿತ ನಡೆಸಿದ ರೀತಿಯಲ್ಲೇ ಮುಂದಿನ ನಾಲ್ಕು ತಿಂಗಳು ಮುಖ್ಯಮಂತ್ರಿಯಾಗಿ ನಾನು ಕಾರ್ಯನಿರ್ವಹಿಸುತ್ತೇನೆ. ಫೆಬ್ರುವರಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ದೆಹಲಿಯ ಜನತೆ ಕೇಜ್ರಿವಾಲ್ ಅವರನ್ನು ಮರಳಿ ಮುಖ್ಯಮಂತ್ರಿ ಸ್ಥಾನಕ್ಕೆ ಕರೆತರುತ್ತಾರೆ ಎಂದು ಭಾವಿಸುತ್ತೇನೆ. ಅಲ್ಲಿಯವರೆಗೆ ಅವರ ಕುರ್ಚಿ ಸಿಎಂ ಕಚೇರಿಯಲ್ಲೇ ಇರುತ್ತದೆ’ ಎಂದು ಅವರು ಹೇಳಿದ್ದಾರೆ.
ಕೇಜ್ರಿವಾಲ್ ಅವರು ಬಳಸಿರುವ ಕುರ್ಚಿ ಬಳಸದೆ ಆತಿಶಿ ಬೇರೆ ಕುರ್ಚಿಯ ಮೇಲೆ ಕುಳಿತರು. ಶಿಕ್ಷಣ, ಆದಾಯ, ಹಣಕಾಸು, ಇಂಧನ ಸೇರಿದಂತೆ ದೆಹಲಿ ಸರ್ಕಾರದ 13 ಖಾತೆಗಳನ್ನು ಆತಿಶಿ ನಿರ್ವಹಿಸುತ್ತಿದ್ದಾರೆ.
ದೆಹಲಿ ವಿಧಾನಸಭೆಯ ಅಧಿವೇಶನ ಸೆಪ್ಟೆಂಬರ್ 26 ಮತ್ತು 27ರಂದು ನಡೆಯಲಿದೆ.
ದೆಹಲಿ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಆತಿಶಿ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು. ಇವರೊಂದಿಗೆ ಐವರು ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ದೆಹಲಿಯ ರಾಜ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಪ್ರಮಾಣವಚನ ಬೋಧಿಸಿದ್ದರು.
ಆತಿಶಿ ಅವರು ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿ. ಸ್ವತಂತ್ರ ಭಾರತದ 17ನೇ ಮಹಿಳಾ ಮುಖ್ಯಮಂತ್ರಿ ಹಾಗೂ ದೆಹಲಿಯ ಎಂಟನೇ ಮುಖ್ಯಮಂತ್ರಿ ಆಗಿದ್ದಾರೆ.