ಠಾಣೆ (ಮಹಾರಾಷ್ಟ್ರ): ವೇಶ್ಯಾವಾಟಿಕೆ ನಡೆಸುತ್ತಿರುವ ಆರೋಪದ ಮೇಲೆ ಸಿನಿಮಾ ನಟಿಯೊಬ್ಬರನ್ನು ಮಹಾರಾಷ್ಟ್ರದ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅನುಷ್ಕಾ ಮೋನಿ ಮೋಹನ್ ದಾಸ್ ಎಂದು ಗುರುತಿಸಲಾಗಿದೆ. ಈಕೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದಳು. ನಟಿಯರಾಗಲು ಬಯಸಿ ಬರುವ ಯುವತಿಯರನ್ನು ಬಲವಂತವಾಗಿ ಹಾಗೂ ಅಕ್ರಮವಾಗಿ ಈ ವೃತ್ತಿಗೆ ತಳ್ಳುತ್ತಿದ್ದಳು ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ರಹಸ್ಯ ಕಾರ್ಯಾಚರಣೆ ಮೂಲಕ ಅನುಷ್ಕಾ ಮೋನಿಯನ್ನು ಬಂಧಿಸಲಾಗಿದೆ. ಹಾಗೂ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದ್ದು ಇವರು ಕೂಡ ಧಾರಾವಾಹಿ ಹಾಗೂ ಬಾಂಗ್ಲಾ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಮುಂಬೈ–ಅಹಮದಾಬಾದ್ ಹೆದ್ದಾರಿಯಲ್ಲಿರುವ ಮಾಲ್ನಲ್ಲಿ ಗಿರಾಕಿಗಳಿಗೆ ಯುವತಿರನ್ನು ಅನುಷ್ಕಾ ಭೇಟಿ ಮಾಡಿಸುತ್ತಿದ್ದಳು ಎಂದು ಅವರು ಹೇಳಿದ್ದಾರೆ.

ಘಟನೆ ಸಂಬಂಧ ದೂರು ದಾಖಲು ಮಾಡಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಎಸಿಪಿ ಬಲ್ಲಾಳ್ ಹೇಳಿದ್ದಾರೆ.
.ವೇಶ್ಯಾವಾಟಿಕೆ: ಮೂವರ ಬಂಧನ.ಮೈಸೂರು | ವೇಶ್ಯಾವಾಟಿಕೆ: ಎಂಟು ಜನರ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.