ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮೌಂಟ್‌ ಮೇರು’ ಏರಿ ಚಾರಿತ್ರಿಕ ಸಾಧನೆ

Published 2 ಸೆಪ್ಟೆಂಬರ್ 2023, 15:55 IST
Last Updated 2 ಸೆಪ್ಟೆಂಬರ್ 2023, 15:55 IST
ಅಕ್ಷರ ಗಾತ್ರ

ಮುಂಬೈ: ಉತ್ತರ ಕಾಶಿಯ ನೆಹರೂ ಪರ್ವತಾರೋಹಣ ಸಂಸ್ಥೆ (ಎನ್‌ಐಎಂ) ಹಾಗೂ ಪುಣೆ ಮೂಲದ ‘ಗಿರಿಪ್ರೇಮಿ’ ಸಾಹಸ ಕ್ಲಬ್‌ ಸದಸ್ಯರ ಜಂಟಿ ತಂಡವು, 6,660 ಮೀಟರ್ ಎತ್ತರದ ‘ಮೌಂಟ್‌ ಮೇರು’ ಶಿಖರ ಏರುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಗರ್ವಾಲ್‌ ಹಿಮಾಲಯ ಪ್ರದೇಶದಲ್ಲಿ ಈ ಶಿಖರವಿದೆ. ಇದರ ಆರೋಹಣವು ತುಂಬಾ ಕ್ಲಿಷ್ಟಕರ ಎಂದೇ ಪರಿಗಣಿಸಿದ್ದು, ಇದನ್ನು ಏರಿದ ಮೊದಲ ಭಾರತೀಯ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅನುಭವಿ ಪರ್ವತಾರೋಹಿ ಉಮೇಶ ಜಿರ್ಪೆ ಈ ಯಾತ್ರೆಯ ನೇತೃತ್ವವಹಿಸಿದ್ದರು.

ಗಿರಿಪ್ರೇಮಿ ತಂಡದ ಗಣೇಶ್‌ ಮೋರೆ, ವಿವೇಕ್‌ ಶಿವದೇ, ವರುಣ್‌ ಭಾಗವತ್‌, ಮಿಂಗ್ಮಾ ಶೆರ್ಪಾ, ಎನ್‌ಐಎಂನ ಹಿರಿಯ ಬೋಧಕ ವಿನೋದ್ ಗುಸೇನ್ ಸೇರಿದಂತೆ ಅವರ ಸಹೋದ್ಯೋಗಿಗಳಾದ ಬಿಹಾರಿ ರಾಣಾ, ಅಜಿತ್‌ ರಾವತ್‌ ಅವರು ಶುಕ್ರವಾರ ಈ ಶಿಖರದ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತದಲ್ಲಿ ಮೌಂಟ್‌ ಮೇರು (ದಕ್ಷಿಣ) ಏರಿದ ಮೊದಲ ತಂಡ ಇದಾಗಿದೆ. ಅಲ್ಲದೇ, ಪಶ್ಚಿಮ ಭಾಗದಿಂದ ಈ ಶಿಖರ ಏರಿದ ವಿಶ್ವದ ಪ್ರಥಮ ತಂಡ ಎಂಬ ಶ್ರೇಯಕ್ಕೆ ಭಾಜನವಾಗಿದೆ. ದಾವಾ ಶೆರ್ಪಾ ಮತ್ತು ಫರ್ಟೆನ್ಸಿಂಗ್ ಶೆರ್ಪಾ ಕೂಡ ಗಿರಿಪ್ರೇಮಿ ತಂಡದೊಟ್ಟಿಗೆ‌ ಶಿಖರವೇರಿದ್ದಾರೆ. 

‘ಕ್ಯಾಂಪ್‌ 1ರ ವರೆಗೆ ತಂಡದ ಸದಸ್ಯರು ತಲುಪಲು ಲಕ್ಪಾ ಶೇರ್ಪಾ ಸಹಾಯ ನೀಡಿದರು. ಇಡೀ ತಂಡ ಚಾರಿತ್ರಿಕ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ’ ಎಂದು ಉಮೇಶ ಜಿರ್ಪೆ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT