ನವದೆಹಲಿ: ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಅಳಿವಿನಂಚಿನಲ್ಲಿರುವ ರಕ್ತ ಚಂದನದ ಸಂರಕ್ಷಣೆ ಮತ್ತು ರೈತರು ಹಾಗೂ ಅರಣ್ಯ ಅವಲಂಬಿತ ಸಮುದಾಯಗಳ ಬದುಕು ಸದೃಢಗೊಳಿಸಲು ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ₹6.2 ಕೋಟಿ ಬಿಡುಗಡೆ ಮಾಡಿದೆ ಎಂದು ಪರಿಸರ ಇಲಾಖೆ ಗುರುವಾರ ತಿಳಿಸಿದೆ.

₹6.2 ಕೋಟಿಯಲ್ಲಿ ತೆಲಂಗಾಣದ ರೈತರಿಗೆ ₹ 17.8 ಲಕ್ಷ, ಆಂಧ್ರದ ರೈತರಿಗೆ ₹1.1 ಕೋಟಿ, ತಮಿಳುನಾಡು ಅರಣ್ಯ ಇಲಾಖೆಗೆ ₹2.98 ಕೋಟಿ, ಕರ್ನಾಟಕ ಅರಣ್ಯ ಇಲಾಖೆಗೆ ₹1.05 ಕೋಟಿ, ಮಹಾರಾಷ್ಟ್ರ ಅರಣ್ಯ ಇಲಾಖೆಗೆ ₹ 69.2 ಲಕ್ಷ ಮತ್ತು ತೆಲಂಗಾಣ ಅರಣ್ಯ ಇಲಾಖೆಗೆ ₹ 5.8 ಲಕ್ಷ ತಲುಪಲಿದೆ. ಉಳಿದ ₹ 16 ಲಕ್ಷವನ್ನು ರಾಜ್ಯ ಜೀವ ವೈವಿಧ್ಯ ಪ್ರಾಧಿಕಾರಗಳಿಗೆ ಹಂಚಿಕೆ ಮಾಡಲಾಗುತ್ತದೆ.

ಈವರೆಗೂ ವಿಶೇಷವಾಗಿ ರಕ್ತಚಂದನ ಬೆಳೆಗಾರರಿಗೆ ₹101 ಕೋಟಿ ದೊರೆತಿದೆ. ಸಂಶೋಧನೆ, ಮೂಲಸೌಕರ್ಯ, ಸಮುದಾಯ ಆಧಾರಿತ ಜೀವವೈವಿಧ್ಯ ಕಾರ್ಯಕ್ರಮ ಮತ್ತು ರಕ್ತಚಂದನ ಬೆಳೆಗಾರರ ಸಾಮಾಜಿಕ–ಆರ್ಥಿಕ ಚೇತರಿಕೆಗೆ ಹಣ ಬಳಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.